ಮಧ್ಯಪ್ರದೇಶದ ಆಶ್ರಯ ಧಾಮದಿಂದ 26 ಬಾಲಕಿಯರು ನಾಪತ್ತೆ
ಭೋಪಾಲ: ಭೋಪಾಲದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ಆಶ್ರಯ ಧಾಮವೊಂದರಿಂದ ಗುಜರಾತ್, ಜಾರ್ಖಂಡ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ಮುಂತಾದ ವಿವಿಧ ರಾಜ್ಯಗಳಿಂದ ಬಂದಿರುವ ಕನಿಷ್ಠ 26 ಬಾಲಕಿಯರು ನಾಪತ್ತೆಯಾಗಿದ್ದಾರೆ.
ಭೋಪಾಲದ ಹೊರವಲಯದ ಪರ್ವಾಲಿಯದಲ್ಲಿರುವ ಅಂಚಲ್ ಬಾಲಕಿಯರ ಹಾಸ್ಟೆಲಿಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್ಸಿಪಿಸಿಆರ್)ದ ಅಧ್ಯಕ್ಷ ಪ್ರಿಯಾಂಕ್ ಕನುಂಗೊ ದಿಢೀರ್ ಭೇಟಿ ನೀಡಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ಅವರು ನೋಂದಣಿ ಪುಸ್ತಕವನ್ನು ಪರಿಶೀಲಿಸಿದಾಗ, 68 ಬಾಲಕಿಯರ ಹೆಸರುಗಳಿದ್ದವು. ಆದರೆ, ಅವರ ಭೇಟಿಯ ವೇಳೆ 26 ಬಾಲಕಿಯರು ನಾಪತ್ತೆಯಾಗಿದ್ದರು.
ನಾಪತ್ತೆಯಾಗಿರುವ ಬಾಲಕಿಯರ ಬಗ್ಗೆ ಪ್ರಶ್ನಿಸಿದಾಗ, ಆಶ್ರಯಧಾಮದ ನಿರ್ದೇಶಕ ಅನಿಲ್ ಮ್ಯಾಥ್ಯೂ ತೃಪ್ತಿಕರ ಉತ್ತರವನ್ನು ನೀಡಲಿಲ್ಲ. ಬಳಿಕ, ಪೊಲೀಸರು ಈ ವಿಷಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ
Next Story