ವಿಶಾಖಪಟ್ಟಣಂ ಬಂದರಿನಲ್ಲಿ 30 ಬೋಟ್ ಬೆಂಕಿಗಾಹುತಿಯಾಗಲು ಧೂಮಪಾನ ಕಾರಣ!
Photo: NDTV
ವಿಶಾಖಪಟ್ಟಣಂ: ವಿಶಾಖಪಟ್ಟಣಂ ಬಂದರಿನಲ್ಲಿ ಧೂಮಪಾನ ಮಾಡಿ ನಂದಿಸದೇ ಎಸೆದ ಸಿಗರೇಟು ತುಂಡು ಹತ್ತಿಸಿದ ಕಿಡಿಗೆ, 30 ಕ್ಕೂ ಹೆಚ್ಚು ಮೀನುಗಾರಿಕಾ ಬೋಟ್ ಗಳು ಸುಟ್ಟು ನಾಶವಾದವು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ndtv ವರದಿ ಮಾಡಿದೆ.
ನ.19 ರ ರಾತ್ರಿ ವಾಸುಪಲ್ಲಿ ನಾನಿ (23) ತನ್ನ ಚಿಕ್ಕಪ್ಪ ಅಲ್ಲಿಪಿಲ್ಲಿ ಸತ್ಯಂ ಅವರೊಂದಿಗೆ ಬಂದರಿನಲ್ಲಿ ದೋಣಿಯಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
"ಅವರು ಒಟ್ಟಿಗೆ ಮದ್ಯ ಸೇವಿಸಿದರು. ನಂತರ, ನಾನಿ ನಂದಿಸದ ಸಿಗರೇಟ್ ತುಂಡನ್ನು ಪಕ್ಕದ ದೋಣಿಯ ನೈಲಾನ್ ಮೀನುಗಾರಿಕೆ ಬಲೆಗೆ ಎಸೆದಿದ್ದರು" ಎಂದು ವಿಶಾಖಪಟ್ಟಣಂ ಪೊಲೀಸ್ ಕಮಿಷನರ್ ಎ ರವಿಶಂಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತಕ್ಷಣ ಮೀನುಗಾರಿಕಾ ಬಲೆಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಇತರ ಬೋಟ್ಗಳಿಗೂ ವ್ಯಾಪಿಸುತ್ತಿಂತೆ ಇಬ್ಬರೂ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನು ಆರೋಪಿಗಳು ಮನೆಗೆ ಹೋಗಿ ಮಲಗಿದ್ದಾರೆ. ಘಟನೆಯ ಗಂಭೀರತೆ ಅರಿವಾಗುತ್ತಿದ್ದಂತೆ ಆರೋಪಿ ಬೆಂಕಿ ಹತ್ತಿಕೊಳ್ಳಲು ತಾನು ಎಸೆದ ಸಿಗರೇಟ್ ತುಂಡ ಕಾರಣ ಎಂದು ತಿಳಿದು, ಅದನ್ನು ಯಾರಿಗೂ ಬಹಿರಂಗಪಡಿಸದಂತೆ ತನ್ನ ಚಿಕ್ಕಪ್ಪನಿಗೆ ಎಚ್ಚರಿಕೆ ನೀಡಿದ್ದಾನೆ ಎನ್ನಲಾಗಿದೆ.
ಆರೋಪಿಗಳನ್ನು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ನೆರವಾಯಿತು. ಬೆಂಕಿ ಹತ್ತಿಕೊಂಡ ಬೋಟ್ನಿಂದ ಆರೋಪಿಗಳು ಪಲಾಯನ ಮಾಡಿದ ದೃಶ್ಯಗಳು ತನಿಖೆಗೆ ನೆರವಾದವು. ಆರೋಪಿಯ ಸ್ಕೂಟರ್ನ ವಿಶಿಷ್ಟವಾದ ಹಾರ್ನ್ ಶಬ್ದವನ್ನು ದೃಢೀಕರಿಸುವ ಸಾಕ್ಷಿಯೂ ಆರೋಪಿಗಳನ್ನು ಬಂಧಿಸಲು ಪುಷ್ಠಿ ನೀಡಿತು ಎಂದು ತಿಳಿದು ಬಂದಿದೆ.
ಬೆಂಕಿಯಲ್ಲಿ 30 ಮೀನುಗಾರಿಕಾ ದೋಣಿಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ . 18 ಭಾಗಶಃ ಹಾನಿಯಾಗಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಇಲ್ಲಿನ ಅಗ್ನಿ ಅವಘಡದಲ್ಲಿ ಮೀನುಗಾರರಿಗೆ ಉಂಟಾದ ನಷ್ಟದ ಶೇಕಡಾ 80 ರಷ್ಟು ನಷ್ಟವನ್ನು ತಮ್ಮ ಸರ್ಕಾರವು ಭರಿಸಲಿದೆ ಎಂದು ಘೋಷಿಸಿದ್ದಾರೆ.