ನೇಪಾಳದ ಜೈಲಿನಿಂದ ಪರಾರಿಯಾಗಿದ್ದ ಐವರು ವಿದೇಶಿ ಪ್ರಜೆಗಳ ಬಂಧನ

ಮೋತಿಹಾರಿ, ಸೆ. 21: ನೇಪಾಳದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ಸಂದರ್ಭ ವಿವಿಧ ಕಾರಾಗೃಹಗಳಿಂದ ಪರಾರಿಯಾಗಿದ್ದ ಐವರು ವಿದೇಶಿ ಪ್ರಜೆಗಳನ್ನು ಬಿಹಾರದ ಮೋತಿಹಾರಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.
ಶಸಸ್ತ್ರ ಸೀಮಾ ಬಲದ ಮಾಹಿತಿಯ ಹಿನ್ನೆಲೆಯಲ್ಲಿ ಸುಡಾನ್‌ನ ನಾಲ್ವರು ಹಾಗೂ ಬೊಲಿವಿಯಾದ ಒಬ್ಬರು ಸೇರಿದಂತೆ ನಾಲ್ವರು ವಿದೇಶಿ ಪ್ರಜೆಗಳನ್ನು ಸೆಪ್ಟಂಬರ್ 20ರಂದು ಬಂಧಿಸಲಾಗಿದೆ ಎಂದು ಪೂರ್ವ ಚಂಪಾರಣ್‌ನ ಪೊಲೀಸ್ ವರಿಷ್ಠ ಸ್ವರ್ಣ ಪ್ರಭಾತ್ ತಿಳಿಸಿದ್ದಾರೆ.
ಘೋಡಾಸಹನ್‌ನ ಬಸ್ ಟರ್ಮಿನಸ್‌ನಲ್ಲಿ ದಾಳಿ ನಡೆಸಲಾಯಿತು ಹಾಗೂ ಐವರು ವಿದೇಶಿ ಪ್ರಜೆಗಳನ್ನು ಬಂಧಿಸಲಾಯಿತು. ವಿಚಾರಣೆ ಸಂದರ್ಭ ಇಬ್ಬರು ನೇಪಾಳದ ಕೇಂದ್ರ ಕಾರಾಗೃಹದಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪ್ರಭಾತ್ ತಿಳಿಸಿದ್ದಾರೆ.
ನೇಪಾಳದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ಸಂದರ್ಭ ಅಲ್ಲಿನ ವಿವಿಧ ಕಾರಾಗೃಹಗಳಿಂದ 1,500ಕ್ಕೂ ಅಧಿಕ ಕೈದಿಗಳು ಪರಾರಿಯಾಗಿದ್ದರು.
Next Story





