ಉತ್ತರಪ್ರದೇಶದಲ್ಲಿ 65 ವರ್ಷದ ವೃದ್ಧನನ್ನು ಥಳಿಸಿ ಹತ್ಯೆ, 5 ಮಂದಿ ಬಂಧನ: ಪೊಲೀಸರು

ಡಿಯೋರಿಯಾ(ಉತ್ತರಪ್ರದೇಶ) : ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ರುದ್ರಪುರ ಪ್ರದೇಶದಲ್ಲಿ 65 ವರ್ಷದ ವ್ಯಕ್ತಿಯೊಬ್ಬರನ್ನು ಥಳಿಸಿ ಹತ್ಯೆಗೈಯ್ಯಲಾಗಿದೆ. ಈ ವೇಳೆ ವೃದ್ದನ ಮಗ ಗಾಯಗೊಂಡಿದ್ದಾರೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಪರಶುರಾಮ್ ಅವರು ನಾಗರೌಲಿ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ ಹಿಂದಿನ ದ್ವೇಷದಲ್ಲಿ ಇತರ ಸಮುದಾಯದ ಕೆಲವು ಜನರೊಂದಿಗೆ ಜಗಳವಾಡಿದ್ದರು.
ಜಗಳ ತಾರಕಕ್ಕೇರಿದ ನಂತರ ಗುಂಪೊಂದು ಪರಶುರಾಮ್ ಹಾಗೂ ಅವರ 22 ವರ್ಷದ ಮಗನ ಮೇಲೆ ಹಲ್ಲೆ ನಡೆಸಿದೆ ಎಂದು ಸರ್ಕಲ್ ಆಫೀಸರ್ ಜಿಲಾಜೀತ್ ಸಿಂಗ್ ಹೇಳಿದ್ದಾರೆ.
ಪರಶುರಾಮ್ ಸಾವನ್ನಪ್ಪಿದರೆ, ಅವರ ಮಗ ಕ್ರಿಶನ್ ಚಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.
ದಾಳಿಯಲ್ಲಿ ಪರಶುರಾಮ್ ಅವರ ಇನ್ನೊಬ್ಬ ಮಗ ರವಿಶಂಕರ್ ಹಾಗೂ ಪುತ್ರಿಯರಾದ ಪಿಂಕಿ ಮತ್ತು ರಿಂಕಿ ಕೂಡ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸಿಂಗ್ ಹೇಳಿದರು.





