ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನ ಇಂದಿನಿಂದ ಆರಂಭ

Photo: PTI
ಹೊಸದಿಲ್ಲಿ: ಸಂಸತ್ತಿನ ಐದು ದಿನಗಳ "ಅಮೃತ್ ಕಾಲ" ಅಧಿವೇಶನ ಇಂದಿನಿಂದ ಆರಂಭವಾಗಲಿದೆ.. ಅಧಿವೇಶನದ ಕಾರ್ಯಸೂಚಿಯಲ್ಲಿ ಭಾರತದ ಸಂಸದೀಯ ಪ್ರಜಾಪ್ರಭುತ್ವದ ವಿಕಾಸದ ಚರ್ಚೆಗಳನ್ನು ಒಳಗೊಂಡಿದೆ. ವಿವಾದಾತ್ಮಕ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸೇರಿದಂತೆ ಎಂಟು ಮಸೂದೆಗಳನ್ನು ಮಂಡಿಸಲು ಪಟ್ಟಿ ಮಾಡಲಾಗಿದೆ.
ಸಂಸತ್ತಿನ 75 ವರ್ಷಗಳ ಕುರಿತು ಸೋಮವಾರದ ಚರ್ಚೆಯನ್ನು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಪಿಯೂಷ್ ಗೋಯಲ್ ಅವರು ಆರಂಭಿಸುವ ಸಾಧ್ಯತೆಯಿದೆ.
"ಭಾರತದ ಸಂಸತ್ತಿನ ಶ್ರೀಮಂತ ಪರಂಪರೆಯನ್ನು ಸ್ಮರಿಸುವ ಮತ್ತು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸಂಕಲ್ಪ" ಕಾರ್ಯಕ್ರಮಕ್ಕಾಗಿ ಮಂಗಳವಾರ ಬೆಳಿಗ್ಗೆ 11 ಗಂಟೆಗೆ, ಸೆಂಟ್ರಲ್ ಹಾಲ್ ನಲ್ಲಿ ಲೋಕಸಭೆ ಮತ್ತು ರಾಜ್ಯಸಭಾ ಸಂಸದರ ಸಭೆಯು ನಡೆಯಲಿದೆ. ಅದರ ನಂತರ ಫೋಟೋ ಸೆಷನ್ ನಡೆಯಲಿದೆ.
ಸೆಂಟ್ರಲ್ ಹಾಲ್ ನಲ್ಲಿ ಮಂಗಳವಾರದ ಕಾರ್ಯಕ್ರಮದ ನಂತರ, ಸದನವನ್ನು ಹೊಸ ಸಂಸತ್ ಭವನಕ್ಕೆ ಸ್ಥಳಾಂತರಿಸಲಾಗುತ್ತದೆ.





