ಅಂಡಮಾನ್ ಸಮುದ್ರದಲ್ಲಿ ಜೀವಂತ ಜ್ವಾಲಾಮುಖಿ: ವಿಜ್ಞಾನಿಗಳ ಸಂಶೋಧನೆ

ಪವನ್ ದೇವಾಂಗನ್, ಶ್ರೀರಾಮ ಗುಲ್ಲಾಪಲ್ಲಿ | Photocredit :newindianexpress.com
ಬೆಂಗಳೂರು: ಅಂಡಮಾನ್ ಸಮುದ್ರದಲ್ಲಿ ಸಕ್ರಿಯವಾಗಿರುವ ಜಲಾಂತರ್ಗಾಮಿ ಜ್ವಾಲಾಮುಖಿ (ಕ್ರೇಟರ್ ಸೀವೌಂಟ್)ಯನ್ನು ರಾಷ್ಟ್ರೀಯ ಸಮುದ್ರವಿಜ್ಞಾನ ಸಂಸ್ಥೆ (ಎನ್ಐಒ)ಯ ಇಬ್ಬರು ವಿಜ್ಞಾನಿಗಳು ಹಾಗೂ ಅವರ ತಂಡ ಪತ್ತೆಹಚ್ಚಿದೆ. 2007ರಲ್ಲಿ ಈ ಜ್ವಾಲಾಮುಖಿ ಪತ್ತೆಯಾದಾಗ ಅದು ಭೂಕಂಪ ವಲಯದ ಕೇಂದ್ರಬಿಂದುವಿನಲ್ಲಿತ್ತು.
ಕ್ರೇಟರ್ ಸೀಮೌಂಟ್ ಎಂದು ಹೆಸರಿಡಲಾದ ಈ ಜ್ವಾಲಾಮುಖಿಯು ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳುವ ಸಾಧ್ಯತೆಯಿದ್ದು, ಜಾವಾ-ಸುಮಾತ್ರ ಪ್ರಾಂತದಲ್ಲಿ ಭೂಕಂಪ ಹಾಗೂ ಸುನಾಮಿಗಳಿಗೆ ಕಾರಣವಾಗುವ ನಿರೀಕ್ಷೆಯಿದೆ. ಆದರೂ, ಜ್ವಾಲಾಮುಖಿಯು ಸ್ಪೋಟಿಸುವ ಸಮಯವನ್ನು ದೃಢೀಕರಿಸಲು ಸಾಧ್ಯವಿಲ್ಲವೆಂದು ವಿಜ್ಞಾನಿಗಳು ತಿಳಿಸಿದ್ದಾರೆ.
2018ರಲ್ಲಿ ಎನ್ಐಒನ ಹಿರಿಯ ವಿಜ್ಞಾನಿ ಶ್ರೀರಾಮ ಗುಲ್ಲಾಪಲ್ಲಿ ಹಾಗೂ ಹಿರಿಯ ಪ್ರಧಾನ ವಿಜ್ಞಾನಿ ಪವನ್ ದೇವಾಂಗನ್ ಅವರು ಅಂಡಮಾನ್-ನಿಕೋಬಾರ್ ಜ್ವಾಲಾಮುಖಿ ವಲಯದಲ್ಲಿ ಸಮುದ್ರದಲ್ಲಿ 500 ಮೀಟರ್ ಕಳೆಗಿರುವ ಜಲಾಂತರ್ಗಾಮಿ ಜ್ವಾಲಾಮುಖಿಯಿಂದ ಅನಿಲವು ಸಕ್ರಿಯವಾಗಿ ಹೊರಹೊಮ್ಮುತ್ತಿದ್ದುದನ್ನು ಪತ್ತೆಹಚ್ಚಿದ್ದರು.
2021ರಲ್ಲಿ ಈ ಬಗ್ಗೆ ಮರುಸಂಶೋಧನೆ ನಡೆದ ಅವರು ಅಂಡಮಾನ್-ನಿಕೋಬಾರ್ ದ್ವೀಪದ ಸಮೀಪದ ಸಾಗಾರದಲ್ಲಿ ಜಲಾಂತರ್ಗಾಮಿ ಜ್ವಾಲಾಮುಖಿಯಿರುವುದನ್ನು ಪತ್ತೆಹಚ್ಚಿದ್ದರು.
2007ರ ನವೆಂಬರ್ನಲ್ಲಿ ಸಿಎಸ್ಐಆರ್- ಎನ್ಐಒನ ವಿಜ್ಞಾನಿಗಳು ಹೈ-ರೆಸೆಲ್ಯೂಶನ್ ಸಾಮರ್ಥ್ಯದ ಎಂಬಿಇಎಸ್ ಉಪಕರಣವನ್ನು ಬಳಸಿ ನಡೆಸಿದ ಸಮೀಕ್ಷೆಯಲ್ಲಿ ಅಂಡಮಾನ್-ನಿಕೋಬಾರ್ ದ್ವೀರ ಸಮುದದ ಸಾಗರದಲ್ಲಿ ಅವಳಿ ಜಲಾಂತರ್ಗಾಮಿ ಧೂಮಕೇತುಗಳಿರುವುದನ್ನು ಪತ್ತೆಹಚ್ಚಿದ್ದರು.







