Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರೆಸ್ಟೋರೆಂಟ್ ಆಹಾರದಲ್ಲಿ ಸತ್ತು...

ರೆಸ್ಟೋರೆಂಟ್ ಆಹಾರದಲ್ಲಿ ಸತ್ತು ಬಿದ್ದಿರುವ ಇಲಿಯ ಚಿತ್ರವನ್ನು ಪೋಸ್ಟ್ ಮಾಡಿದ ವ್ಯಕ್ತಿ: ಆಘಾತಕ್ಕೀಡಾದ ನೆಟ್ಟಿಗರು

ವಾರ್ತಾಭಾರತಿವಾರ್ತಾಭಾರತಿ4 July 2023 4:10 PM IST
share
ರೆಸ್ಟೋರೆಂಟ್ ಆಹಾರದಲ್ಲಿ ಸತ್ತು ಬಿದ್ದಿರುವ ಇಲಿಯ ಚಿತ್ರವನ್ನು ಪೋಸ್ಟ್ ಮಾಡಿದ ವ್ಯಕ್ತಿ: ಆಘಾತಕ್ಕೀಡಾದ ನೆಟ್ಟಿಗರು
ಈ ವಿಡಿಯೊವನ್ನು NC ಎಂಬ ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಆ ಸಣ್ಣ ವಿಡಿಯೊ ತುಣುಕಿನಲ್ಲಿ ವ್ಯಕ್ತಿಯೊಬ್ಬರು ಮೇಜಿನ ಮೇಲೆ ಇಡಲಾಗಿರುವ ಆಹಾರ ಪದಾರ್ಥಗಳನ್ನು ತೋರಿಸುತ್ತಿದ್ದಾರೆ. ನಂತರ, ಆತ ಖಾದ್ಯವೊಂದರ ಮೇಲೆ ಕ್ಯಾಮೆರಾವನ್ನು ಹಿಡಿದಿದ್ದು,

ಲೂಧಿಯಾನಾ: ಪಂಜಾಬ್ ರಾಜ್ಯದ ಲೂಧಿಯಾನಾದ ಪ್ರಖ್ಯಾತ ರೆಸ್ಟೋರೆಂಟ್ ಒಂದು ಪೂರೈಸಿರುವ ತಿನಿಸಿನಲ್ಲಿ ಸತ್ತ ಇಲಿ ಕಂಡು ಬಂದಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ಆರೋಪಿಸಿದ್ದಾರೆ. ಆ ವೈರಲ್ ವಿಡಿಯೊದಲ್ಲಿ ಪ್ರಕಾಶ್ ಧಾಭಾದಲ್ಲಿ ಪೂರೈಸಲಾಗಿರುವ ಮಾಂಸಾಹಾರಿ ಸಾರಿನಲ್ಲಿ ಸತ್ತ ಇಲಿಯೊಂದು ಇರುವುದು ಕಂಡು ಬಂದಿದೆ. ಆದರೆ, ಈ ಎಲ್ಲ ಆರೋಪಗಳನ್ನು ನಿರಾಕರಿಸಿರುವ ರೆಸ್ಟೋರೆಂಟ್, ಗ್ರಾಹಕರು ನಮ್ಮ ಸಂಸ್ಥೆಯ ಹೆಸರನ್ನು ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿ ಆರೋಪ ಮಾಡಿದೆ ಎಂದು ndtv.com ವರದಿ ಮಾಡಿದೆ.

ಈ ವಿಡಿಯೊವನ್ನು NC ಎಂಬ ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಆ ಸಣ್ಣ ವಿಡಿಯೊ ತುಣುಕಿನಲ್ಲಿ ವ್ಯಕ್ತಿಯೊಬ್ಬರು ಮೇಜಿನ ಮೇಲೆ ಇಡಲಾಗಿರುವ ಆಹಾರ ಪದಾರ್ಥಗಳನ್ನು ತೋರಿಸುತ್ತಿದ್ದಾರೆ. ನಂತರ, ಆತ ಖಾದ್ಯವೊಂದರ ಮೇಲೆ ಕ್ಯಾಮೆರಾವನ್ನು ಹಿಡಿದಿದ್ದು, ಅದರಲ್ಲಿ ಆತ ಚಮಚಾ ಬಳಸಿ ಅದರಿಂದ ಸತ್ತ ಇಲಿಯನ್ನು ಹೊರ ತೆಗೆಯುತ್ತಿರುವುದು ಸೆರೆಯಾಗಿದೆ. ಆ 31 ಸೆಕೆಂಡುಗಳ ಸಣ್ಣ ಅವಧಿಯ ತುಣುಕಿನಲ್ಲಿ ಬಾಲವನ್ನೂ ನೋಡಬಹುದಾಗಿದೆ.

"ಲೂಧಿಯಾನಾದಲ್ಲಿನ ಪ್ರಕಾಶ್ ಧಾಭಾ. ಭಾರತವು ಕೋಳಿ ಸಾರಿನಲ್ಲಿ ಇಲಿಯನ್ನು ಒದಗಿಸುತ್ತದೆ. ರೆಸ್ಟೋರೆಂಟ್ ಮಾಲಕರು ಆಹಾರ ನಿರೀಕ್ಷಕರಿಗೆ ಲಂಚ ನೀಡಿಯೇನಾದರೂ ಪಾರಾಗುತ್ತಿದ್ದಾರಾ? ಭಾರತದ ಹಲವಾರು ಅಡುಗೆ ಕೋಣೆಗಳಲ್ಲಿನ ಗುಣಮಟ್ಟವು ತೀರಾ ಕಳಪೆಯಾಗಿದೆ. ಹುಷಾರಾಗಿರಿ" ಎಂದು ಆ ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ.

ಈ ನಡುವೆ, ಫೇಸ್‌ಬುಕ್‌ನಲ್ಲಿ ಪ್ರಕಟವಾಗಿರುವ ಮತ್ತೊಂದು ವಿಡಿಯೊದಲ್ಲಿ ಗ್ರಾಹಕ ಹಾಗೂ ರೆಸ್ಟೋರೆಂಟ್ ಆಡಳಿತ ಮಂಡಳಿಯ ನಡುವೆ ಬಿಸಿ ಬಿಸಿ ಮಾತಿನ ಚಕಮಕಿ ನಡೆಯುತ್ತಿರುವುದು ಸೆರೆಯಾಗಿದ್ದು, ಸದರಿ ಗ್ರಾಹಕನು ತನಗೆ ಸತ್ತ ಇಲಿಯನ್ನು ಪೂರೈಸಲಾಗಿದೆ ಎಂದು ಆರೋಪಿಸುತ್ತಿರುವುದು ಕಂಡು ಬಂದಿದೆ.

ಈ ವಿಡಿಯೊ ಹಲವಾರು ಅಂತರ್ಜಾಲ ಬಳಕೆದಾರರಿಗೆ ಆಘಾತವನ್ನುಂಟು ಮಾಡಿದ್ದು, ಅವರೆಲ್ಲ ರೆಸ್ಟೋರೆಂಟ್‌ನ ನಿರ್ಲಕ್ಷತೆ ವಿರುದ್ಧ ಕಿಡಿ ಕಾರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಓರ್ವ ಬಳಕೆದಾರರು, "ಈ ವಿಷಯವನ್ನು ಆರೋಗ್ಯ ಪ್ರಾಧಿಕಾರಗಳು ನಿರ್ದಾಕ್ಷಿಣ್ಯವಾಗಿ ನಿರ್ವಹಿಸಬೇಕು" ಎಂದು ಆಗ್ರಹಿಸಿದ್ದಾರೆ.

ಮತ್ತೊಬ್ಬರು, "ಆ ಸಾರನ್ನು ಸೇವಿಸಿದ ಎಲ್ಲರ ಬಗ್ಗೆ ಕನಿಕರವಾಗುತ್ತಿದೆ‌. ಇದು ನೇರವಾಗಿ ಗ್ರಾಹಕರ ನ್ಯಾಯಾಲಯದ ಪ್ರಕರಣವಾಗಿದೆ. ಇನ್ನು ಕೆಲವು ವರ್ಷ ಕಳೆದ ನಂತರ ಈ ಪ್ರಕರಣಕ್ಕೆ ಭಾರಿ ದಂಡ ವಿಧಿಸುವುದನ್ನು ನಿರೀಕ್ಷಿಸಬಹುದಾಗಿದೆ" ಎಂದು ಹೇಳಿದ್ದಾರೆ.

"ಚಿಂತಾಜನಕ" ಎಂದು ಮಗದೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

ನಾಲ್ಕನೆಯ ವ್ಯಕ್ತಿಯೊಬ್ಬರು, "ರೆಸ್ಟೋರೆಂಟ್‌ನ ಪರವಾನಗಿಯನ್ನು ರದ್ದುಗೊಳಿಸಬೇಕು" ಎಂದು ಆಗ್ರಹಿಸಿದ್ದಾರೆ.

ಟ್ವಿಟರ್ ಬಳಕೆದಾರರೊಬ್ಬರು, "ಈ ರೆಸ್ಟೋರೆಂಟ್ ಹೆಸರು LFC (ಲೂಧಿಯಾನಾ ಪ್ರೈಡ್ ಚುಹಾ) ಎಂದಿರಬೇಕಿತ್ತು" ಎಂದು ಗೇಲಿ ಮಾಡಿದ್ದಾರೆ.

"ಇದು ಲೂಧಿಯಾನಾದಲ್ಲಿ ಹೊಸದೇನೂ ಅಲ್ಲ. ಇಲ್ಲಿನ ಮಾಲಕರು ಸಂಪೂರ್ಣ ಸುಳ್ಳು ಹೇಳುತ್ತಾರೆ. ಈ ಉಪಾಹಾರ ಗೃಹಗಳ ತೆರೆದ ಅಡುಗೆ ಕೋಣೆಗಳು ಗಲೀಜಾಗಿದ್ದು, ದೊಡ್ಡ ಸಂಖ್ಯೆಯ ಇಲಿಗಳನ್ನಿಲ್ಲಿ ನೋಡಬಹುದಾಗಿದೆ. ಇಲಿಗಳು ಕಂಡು ಬರುವ ಹಲವಾರು ಪ್ರಖ್ಯಾತ ರೆಸ್ಟೋರೆಂಟ್‌ಗಳನ್ನು ಲೂಧಿಯಾನಾದಲ್ಲಿ ನೋಡಬಹುದಾಗಿದೆ" ಎಂದು ಮತ್ತೊಬ್ಬ ಬಳಕೆದಾರರು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X