ವಂಶಾವಳಿ ಔಷಧದಿಂದ ಕ್ಯಾನ್ಸರ್ ಆರೈಕೆಯತ್ತ ಕ್ರಾಂತಿಕಾರಕ ಹೆಜ್ಜೆ
Photo Credit: NCI/Unsplash
ಹೊಸದಿಲ್ಲಿ: ಪ್ರತಿ ವರ್ಷ ಜಗತ್ತಿನಾದ್ಯಂತ 20 ದಶಲಕ್ಷ ಹೊಸ ಕ್ಯಾನ್ಸರ್ ರೋಗಿಗಳು ಸೇರ್ಪಡೆಯಾಗುವ ಮೂಲಕ ಕ್ಯಾನ್ಸರ್ ಪ್ರಮುಖ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಉದ್ಭವಿಸಿದೆ. ಮುಂದಿನ ದಶಕದೊಳಗೆ ಕ್ಯಾನ್ಸರ್ ಹೊರೆಯು ಶೇ. 60ರಷ್ಟು ಹೆಚ್ಚಳವಾಗಲಿದ್ದು, ಮರಣ ಪ್ರಮಾಣದ ಎರಡನೆ ಅತಿ ಮುಖ್ಯ ಕಾರಣವಾಗಿ ಹೊರ ಹೊಮ್ಮಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಭಾರತವೊಂದೇ ಪ್ರತಿ ವರ್ಷ ಅಂದಾಜು 1.4 ದಶಲಕ್ಷ ಕ್ಯಾನ್ಸರ್ ಪ್ರಕರಣಗಳನ್ನು ಸೇರ್ಪಡೆ ಮಾಡುತ್ತಿದ್ದು, ಪ್ರತಿ ವರ್ಷ 1000 ಭಾರತೀಯರ ಪೈಕಿ ಓರ್ವ ರೋಗಿಯಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ ಎಂದು ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ದಾಖಲೆಯು ಹೇಳುತ್ತದೆ.
ಕ್ಯಾನ್ಸರ್ ವಂಶಾವಳಿಗೆ ಸಂಬಂಧಿಸಿದ ರೋಗ. ಈ ರೋಗವು ವಂಶಾವಳಿಯ ಕೆಲವು ಕೋಶಗಳು ಅನಿಯಂತ್ರಿತವಾಗಿ ವಿಭಜನೆಯಾಗುವ ಮೂಲಕ ಸೃಷ್ಟಿಯಾಗುತ್ತದೆ. ಈ ಬದಲಾವಣೆಗಳು ವಂಶಪಾರಂಪರ್ಯವಾಗಿರಬಹುದು ಅಥವಾ ತಂದುಕೊಂಡ ಬದಲಾವಣೆಯಾಗಿರಬಹುದು. ಸ್ತನ ಕ್ಯಾನ್ಸರ್ ಹಾಗೂ ಅಂಡಾಶಯ ಕ್ಯಾನ್ಸರ್ ನಂಥ ಹಲವಾರು ವಂಶಪಾರಂಪರ್ಯ ಕ್ಯಾನ್ಸರ್ ಗಳು ವಂಶಪಾರಂಪರ್ಯವಾಗಿ ಹರಿದು ಬಂದಿರುವ ವಂಶಾವಳಿಯ ತಳಿಗಳಿಂದ ಬರುತ್ತವೆ. ಕಳೆದ ಒಂದೆರಡು ದಶಕಗಳಲ್ಲಿ ವಂಶಾವಳಿ ತಂತ್ರಜ್ಞಾನದಲ್ಲಿನ ಸುಧಾರಣೆಯಿಂದ ಕ್ಯಾನ್ಸರ್ ಜೆನೋಮ್ ಅಟ್ಲಸ್ ನಂಥ ಜಾಗತಿಕ ಉಪಕ್ರಮಗಳು ಕ್ಯಾನ್ಸರ್ ನ ಅಣು ಸಂರಚನೆಯನ್ನು ಅರ್ಥ ಮಾಡಿಕೊಳ್ಳಲು ಒಂದು ಶಸ್ತ್ರವನ್ನು ಒದಗಿಸಿವೆ. ಇದರಿಂದಾಗಿ ಅಣುವಿನಲ್ಲಿನ ದೋಷವನ್ನು ಗುರಿಯಾಗಿಸಿಕೊಂಡು ಹೊಸ ತಲೆಮಾರಿನ ಚಿಕಿತ್ಸಾ ಕ್ರಮಗಳು ಬೆಳಕಿಗೆ ಬಂದಿವೆ.
ನಿಖರ ಗ್ರಂಥಿ ವಿಜ್ಞಾನ
ಇಂತಹ ಚಿಕಿತ್ಸೆಗಳನ್ನು ನಿಖರ ಗ್ರಂಥಿ ಶಾಸ್ತ್ರ ಚಿಕಿತ್ಸೆಗಳು ಎಂದು ಕರೆಯಲಾಗುತ್ತದೆ. ಕ್ಯಾನ್ಸರ್ ರೋಗಿಗಳ ಅರ್ಹತೆಯನ್ನು ಅಣು ಪರೀಕ್ಷೆಗಳ ಮೂಲಕ ಪತ್ತೆ ಹಚ್ಚಲಾಗುತ್ತದೆ. ಅಮೆರಿಕಾ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯು ಅನುಮೋದನೆ ನೀಡಿರುವ 200ಕ್ಕೂ ಹೆಚ್ಚು ಚಿಕಿತ್ಸಾ ಕ್ರಮಗಳ ಪೈಕಿ ಪ್ರತಿ ಮೂವರಲ್ಲಿ ಜೈವಿಕ ಗುರುತಾಗಿ ಡಿಎನ್ಎ ಆಧಾರಿತ ಪರೀಕ್ಷೆಗಳಿವೆ. ಕ್ಯಾನ್ಸರ್ ಗೆ ಹೊಸ ಜೈವಿಕ ಗುರುತುಗಳನ್ನು ಸಂಶೋಧಿಸುವ ಪ್ರಯತ್ನದಲ್ಲಿ ವಿಜ್ಞಾನಿಗಳಿರುವಾಗಲೇ ವಂಶಾವಳಿ ಪರೀಕ್ಷೆಗಳು ಹೇಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮುಖ್ಯ ಹಾದಿಯಾಗಬಹುದು ಎಂಬುದರತ್ತ ಗಮನ ಸೆಳೆಯುತ್ತಿವೆ.
ಗಮನಾರ್ಹ ಸಂಗತಿಯೆಂದರೆ, ಅಧ್ಯಯನದ ಪ್ರಕಾರ, ಮಿದುಳು ಗಡ್ಡೆ ಹಾಗೂ ಕರುಳು ಅಥವಾ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಲ್ಲಿ ಕಂಡು ಬಂದಿರುವ ಭಾರಿ ಡಿಎನ್ಎ ಬದಲಾವಣೆಗಳು ಚಿಕಿತ್ಸಾ ಕ್ರಮಗಳ ನೂತನ ಗುರಿಗಳಾಗಿ ಬದಲಾಗಿವೆ. ಅಂಡಾಶಯ ಕ್ಯಾನ್ಸರ್ ಅಥವಾ ಸರ್ಕೊಮಾಸ್ ನಂತಹ ಸವಾಲಿನ ಪರಿಸ್ಥಿತಿಗಳು ನಮ್ಮ ತಿಳಿವಳಿಕೆಯನ್ನು ಮರು ರೂಪಿಸಬಹುದಾದ ವಿಶಿಷ್ಟ ಒಳನೋಟಗಳನ್ನೂ ಅಧ್ಯಯನವು ಒದಗಿಸಿದೆ.
ಉದಾಹರಣೆಗೆ, ಶೇ. 10ರಷ್ಟು ಸರ್ಕೊಮಾಸ್ (ಮೂಳೆ ಹಾಗೂ ಮೃದು ಜೀವಕೋಶಗಳ ವಿರಳ ಕ್ಯಾನ್ಸರ್) ರೋಗಿಗಳಲ್ಲಿ ಚಿಕಿತ್ಸಾ ನಿರ್ಣಯಗಳ ಮೇಲೆ ಪರಿಣಾಮ ಬೀರುವಂಥ ವಂಶಾವಳಿ ಬದಲಾವಣೆಯನ್ನು ಹೊಂದಿರುವುದು ಕಂಡು ಬಂದಿದೆ. ಇದೇ ರೀತಿ ಸಂಶೋಧಕರು ಬಹುತೇಕ ಅಂಡಾಶಯ ಕ್ಯಾನ್ಸರ್ ಗಳು ವಂಶಪಾರಂಪರ್ಯವಾಗಿ ಬಂದಿರುವುದನ್ನೂ ಗುರುತಿಸಿದ್ದಾರೆ.
ಅಧ್ಯಯನ ವರದಿಗಳ ಪ್ರಕಾರ, ಕ್ಯಾನ್ಸರ್ ವಂಶವಾಹಿಗಳ ರೋಗವಾಗಿದ್ದು, ವಂಶವಾಹಿ ಕೋಶಗಳು ಅನಿಯಂತ್ರಿತವಾಗಿ ವಿಭಜನೆಯಾಗುವುದರಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಬ್ರಿಟನ್ ನ ಮುಂದುವರಿದಿರುವ ‘1,00,000 ಜಿನೋಮ್ ಪ್ರಾಗ್ರಾಮ್’ ಪ್ರಕಾರ, ಕ್ಯಾನ್ಸರ್ ವಂಶವಾಹಿ ಶಾಸ್ತ್ರವು ಕ್ಯಾನ್ಸರ್ ಆರೈಕೆಯನ್ನು ನಿಶ್ಚಿತವಾಗಿ ಬದಲಿಸಲಿದೆ.
ಈ ಹಿನ್ನೆಲೆಯಲ್ಲಿ, ವಂಶವಾಹಿ ಔಷಧವು ಕ್ಯಾನ್ಸರ್ ಆರೈಕೆಯಲ್ಲಿ ಹೊಸ ಮಜಲನ್ನು ಸೃಷ್ಟಿಸುವ ಆಶಾವಾದ ಮೂಡಿಸಿದೆ.
ಆಧಾರ: thehindu.com