ಅವಶೇಷಗಳ ರಾಶಿಯಲ್ಲಿ ಹೂತುಹೋದ ಶಿವ ದೇವಾಲಯ
ಡೆಹ್ರಾಡೂನ್,ಆ.6: ಖೀರ್‌ಗಂಗಾನದಿಯಲ್ಲಿ ಮಂಗಳವಾರ ಸಂಭವಿಸಿದ ದಿಢೀರ್ ಪ್ರವಾಹವು ಹೊತ್ತುತಂದಿರುವ ಅವಶೇಷಗಳ ರಾಶಿಯಲ್ಲಿ ಉತ್ತರಕಾಶಿಯಲ್ಲಿರುವ ಪುರಾತನ ಕಲ್ಪ ಕೇದಾರ ದೇವಾಲಯವು ಹೂತುಹೋಗಿರುವುದಾಗಿ ವರದಿಯಾಗಿದೆ.
ಕೇದಾರನಾಥ ದೇವಾಲಯವನ್ನೇ ಹೋಲುವ ವಾಸ್ತುಶಿಲವಿರುವ ದೇವಾಲಯವು ಶತಮಾನಗಳ ಹಿಂದೆಯೂ ಅವಶೇಷಗಳ ನಡುವೆ ಮುಚ್ಚಿಹೋಗಿತ್ತು ಹಾಗೂ ಅದರ ಶಿಖರವಷ್ಟೇ ಗೋಚರವಾಗುತ್ತಿತ್ತು. 1945ನೇ ಇಸವಿಯಲ್ಲಿ ನಡೆದ ಉತ್ಖನದಲ್ಲಿ ದೇವಾಲಯವಿರುವುದನ್ನು ಪತ್ತೆಹಚ್ಚಲಾಗಿತ್ತು.ṣಈ ದೇವಾಲಯವನ್ನು ಸಂದರ್ಶಿಸಲು ಯಾತ್ರಿಕರು ನೆಲಮಟ್ಟದಿಂದ ಕೆಳಕ್ಕಿಳಿದು ತೆರಳಬೇಕಾಗಿತ್ತು.
Next Story





