ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಉದ್ಯೋಗ ಪುನರ್ವಸತಿ ಯೋಜನೆ ಯಾಕಿಲ್ಲ?: ರಾಜ್ಯ ಸರಕಾರಗಳನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

File Photo | ANI
ಹೊಸದಿಲ್ಲಿ: ಸರಕಾರಿ ಇಲಾಖೆಗಳು ಅಥವಾ ಸಂಸ್ಥೆಗಳಲ್ಲಿ ಉದ್ಯೋಗ ನೀಡುವ ಮೂಲಕ ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಯನ್ನು ಯಾಕೆ ರೂಪಿಸಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರಶ್ನಿಸಿದೆ.
ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಸರಕಾರಿ ಉದ್ಯೋಗ ನೀಡುವಲ್ಲಿ ಸಮಸ್ಯೆಗಳಿದ್ದರೆ, ರಾಜ್ಯ ಸರಕಾರಗಳು ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಜೀವನಾಧಾರ ಭತ್ಯೆ ನೀಡಲು ಒಂದು ನೀತಿಯನ್ನು ರೂಪಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಹೇಳಿದೆ.
ಆ್ಯಸಿಡ್ ದಾಳಿ ಸಂತ್ರಸ್ತೆ ಶಹೀನ್ ಮಲಿಕ್ ಸಲ್ಲಿಸದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ ಪೀಠ ವಿಚಾರಣೆ ನಡೆಸಿತು.
ಆ್ಯಸಿಡ್ ದಾಳಿ ಸಂತ್ರಸ್ತರ ಯೋಗಕ್ಷೇಮ, ಸೂಕ್ತ ಪುನರ್ವಸತಿ ಹಾಗೂ ಇತರ ಕ್ರಮಗಳಿಗಾಗಿ ರಾಜ್ಯಗಳು ಹಾಗೂ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಶಹೀನ್ ಮಲಿಕ್ ಅರ್ಜಿಯಲ್ಲಿ ಕೋರಿದ್ದರು.
Next Story





