ಕೇರಳ | ಫೆಲೆಸ್ತೀನ್ ಪರ ಪ್ರತಿಭಟನೆ : ಜಿಐಒ ವಿದ್ಯಾರ್ಥಿನಿ ಸಂಘಟನೆಯ 30 ಕಾರ್ಯಕರ್ತೆಯರ ವಿರುದ್ಧ ಪ್ರಕರಣ ದಾಖಲು

Photo credit: onmanorama.com
ಕಣ್ಣೂರು : ಕೇರಳದ ಕಣ್ಣೂರಿನ ಮಾಡಾಯಿಪಾರದಲ್ಲಿ ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಜಿಐಒ ವಿದ್ಯಾರ್ಥಿನಿ ಸಂಘಟನೆಯ 30 ಕಾರ್ಯಕರ್ತೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಪರಿಸರ ಸೂಕ್ಷ್ಮ ಪ್ರದೇಶವಾದ ಮಾಡಾಯಿಪಾರದಲ್ಲಿ ಪ್ರತಿಭಟನೆ ನಡೆಸಿದ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಜಿಐಒ) ಸಂಘಟನೆಯ ಅಫ್ರಾ ಶಿಹಾಬ್ ಸೇರಿದಂತೆ 30 ಮಂದಿ ಕಾರ್ಯಕರ್ತೆಯರ ವಿರುದ್ಧ ವಿರುದ್ಧ ಪಝಯಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಾಡಾಯಿಪಾರ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಧ್ವಜಗಳು ಮತ್ತು ಬ್ಯಾನರ್ಗಳನ್ನು ಹಿಡಿದುಕೊಂಡು ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬಳಿಕ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Next Story





