ನಟ ದಿಲೀಪ್ ದೋಷಮುಕ್ತ | ತೀರ್ಪಿನ ವಿರುದ್ಧ ಮೇಲ್ಮನವಿಗೆ ಕೇರಳ ಸರಕಾರ ನಿರ್ಧಾರ

ನಟ ದಿಲೀಪ್ | Photo Credit : Thulasi Kakkat \ thehindu.com
ಕೊಚ್ಚಿ,ಡಿ.8: 2017ರಲ್ಲಿ ಚಲನಚಿತ್ರ ನಟಿಯ ಅಪಹರಣ ಹಾಗೂ ಲೈಂಗಿಕ ಹಲ್ಲೆ ಪ್ರಕರಣದಲ್ಲಿ ಮಲಯಾಳಂ ಚಿತ್ರ ನಟ ದಿಲೀಪ್ ಅವರನ್ನು ದೋಷಮುಕ್ತಗೊಳಿಸಿದ ಎರ್ನಾಕುಲಂಜಿಲ್ಲಾ ಹಾಗೂ ಪ್ರಧಾನ ಸೆಶನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಕೇರಳ ಸರಕಾರವು ಸೋಮವಾರ ಘೋಷಿಸಿದೆ.
ರಾಜ್ಯ ಕಾನೂನು ಸಚಿವ ಪಿ. ರಾಜೀವ್ ಕುಮಾರ್ ಅವರು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ‘‘ ಸರಕಾರವು ಸಂತ್ರಸ್ತೆಯ ಜೊತೆ ದೃಢವಾಗಿ ನಿಲ್ಲುತ್ತದೆ ಹಾಗೂ ನ್ಯಾಯವು ಸಂಪೂರ್ಣವಾಗಿ ದೊರೆಯುವುದನ್ನು ಖಾತರಿಪಡಿಸಲು ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಲಿದೆ’’ ಎಂದು ತಿಳಿಸಿದ್ದಾರೆ.
Next Story





