ಸುಧಾರಿತ ‘ಅಸ್ತ್ರ ’ಪರೀಕ್ಷೆ ಪರೀಕ್ಷೆ ಯಶಸ್ವಿ | 100 ಕಿ.ಮೀ. ವ್ಯಾಪ್ತಿಯ ಗುರಿಯನ್ನು ತಲುಪಬಲ್ಲ ಸಾಮರ್ಥ್ಯದ ಕ್ಷಿಪಣಿ

PTI File photo
ಹೊಸದಿಲ್ಲಿ: ಸುಮಾರು 100 ಕಿ.ಮೀ.ಗೂ ಅಧಿಕ ವ್ಯಾಪ್ತಿಯಲ್ಲಿರುವ ಗುರಿಗಳನ್ನು ತಲುಪುವ ಸಾಮರ್ಥ್ಯ ಹೊಂದಿರುವ ಸ್ವದೇಶಿ ನಿರ್ಮಿತ ಅಸ್ತ್ರ ಕ್ಷಿಪಣಿಯನ್ನು ಗುರುವಾರ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಓ)ಯು ವಿನ್ಯಾಸಗೊಳಿಸಿರುವ ಈ ಕ್ಷಿಪಣಿಯು ಸುಧಾರಿತ ಪಥದಿಗ್ದರ್ಶನ ಹಾಗೂ ನೇವಿಗೇಶನ್ ವ್ಯವಸ್ಥೆಗಳಿಂದ ಸುಸಜ್ಜಿತವಾಗಿದ್ದು, ಅತ್ಯಧಿಕ ನಿಖರತೆಯೊಂದಿಗೆ ಗುರಿಗಳನ್ನು ನಾಶಪಡಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಅಸ್ತ್ರ ಕ್ಷಿಪಣಿಯನ್ನು ಈಗಾಗಲೇ ಭಾರತೀಯ ವಾಯುಪಡೆ (ಐಎಎಫ್)ಯಲ್ಲಿಸೇರ್ಪಡೆಗೊಳಿಸಲಾಗಿದ್ದು, ಅದು ಮುಂಚೂಣಿಯ ಯುದ್ಧವಿಮಾನ ಸುಖೋಯಿ 30 ಎಂಕೆಐ ವಿಮಾನದೊಂದಿಗೆ ಸಂಯೋಜಿಸಲ್ಪಟ್ಟಿದೆ.
‘‘ಈ ಯಶಸ್ವಿ ಪರೀಕ್ಷೆಯು ಅಸ್ತ್ರ ಕ್ಷಿಪಣಿಯ ‘ಎಲ್ಸಿಎ ಎಫ್ಎಂಕೆ1’ ಮಾದರಿಯನ್ನು ವಾಯುಪಡೆಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಕ್ಷಿಪಣಿಯ ಕಾರ್ಯನಿರ್ವಹಣೆ ಹಾಗೂ ಮೌಲ್ಯಮಾಪನದಲ್ಲಿ ಇನ್ನೂ ಹೆಚ್ಚಿನ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವ ಯೋಜನೆಗಳನ್ನು ರೂಪಿಸಲಾಗಿದೆ’ ಎಂದು ರಕ್ಷಣಾ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ.
3.8 ಮೀಟರ್ ವಿಸ್ತೀರ್ಣದ ಅತ್ಯಾಧುನಿಕ ಅಸ್ತ್ರ ಕ್ಷಿಪಣಿ 154 ಕೆ.ಜಿ.ಯಷ್ಟು ಉಡಾವಣಾ ತೂಕವನ್ನು ಹೊಂದಿದೆ. 15 ಕೆ.ಜಿ ಭಾರದ ಸಿಡಿತಲೆಗಳನ್ನು ಕೊಂಡೊಯ್ಯಬಲ್ಲ ಈ ಕ್ಷಿಪಣಿಯನ್ನು ವಿಭಿನ್ನ ದೂರಗಳಲ್ಲಿ ಹಾಗೂ ಎತ್ತರಗಳಲ್ಲಿರುವ ಗುರಿಗಳನ್ನು ನಾಶಪಡಿಸಲು ಸಾಧ್ಯವಾಗುವಂತಹ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಕೇಂದ್ರ ರಕ್ಷಣಾ ಸಚಿವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್ಡಿಓ, ಭಾರತೀಯ ವಾಯುಪಡೆ, ಎಡಿಎ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಸೇರಿದಂತೆ ಅಸ್ತ್ರ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾತ್ರವಹಿಸಿದ್ದ ಎಲ್ಲಾ ತಂಡಗಳನ್ನು ಅಭಿನಂದಿಸಿದ್ದಾರೆ.
ಒಂದೇ ಘಟಕವಾಗಿ ಕಾರ್ಯಾಚರಿಸುತ್ತಿದ್ದ ಸ್ಪೇಡೆಕ್ಸ್ ಉಪಗ್ರಹಗಳನ್ನು ಪರಸ್ಪರ ಬೇರ್ಪಡಿಸುವ (ಡಿಡಾಕಿಂಗ್) ಕಾರ್ಯಾಚರಣೆಯನ್ನು ತಾನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಗುರುವಾರ ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಚಂದ್ರನ ಕುರಿತ ಅನ್ವೇಷಣೆ, ಮಾನವಸಹಿತ ಬಾಹ್ಯಾಕಾಶ ಯಾನ ಹಾಗೂ ಸ್ವಂತದ್ದಾದ ಬಾಹ್ಯಾಕಾಶ ನಿಲ್ದಾಣದ ಸ್ಥಾಪನೆ ಸೇರಿದಂತೆ ಭವಿಷ್ಯದ ಮಿಶನ್ಗಳಿಗೆ ಹಾದಿಯನ್ನು ಇದು ಸುಗಮಗೊಳಿಸಿದೆ ಎಂದು ಇಸ್ರೋ ತಿಳಿಸಿದೆ.
ಪರಸ್ಪರ ಬೇರ್ಪಡುವಿಕೆಯನ್ನು ಸ್ಪೇಡೆಕ್ಸ್ ಉಪಗ್ರಹಗಳು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಭಾರತೀಯ ಅಂತರಿಕ್ಷ ನಿಲ್ದಾಣ ಚಂದ್ರಯಾನ 4 ಹಾಗೂ ಗಗನಯಾನ ಸೇರಿದಂತೆ ಭವಿಷ್ಯತ್ತಿನ ಮಹತ್ವಾಕಾಂಕ್ಷೆಯ ಮಿಶನ್ ಗಳ ಸುಗಮ ನಿರ್ವಹಣೆಗೆ ಇದು ದಾರಿ ಮಾಡಿಕೊಡುತ್ತದೆ’’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಉಪಗ್ರಹಗಳ ಯಶಸ್ವಿ ಬೇರ್ಪಡುವಿಕೆಯನ್ನು ಪ್ರಕಟಿಸುತ್ತಾ ಹೇಳಿದ್ದಾರೆ.
‘‘ ಇಸ್ರೋ ತಂಡಕ್ಕೆ ಅಭಿನಂದನೆಗಳು ಹಾಗೂ ಈ ಸಾಧನೆಯು ಪ್ರತಿಯೊಬ್ಬ ಭಾರತೀಯನಿಗೂ ಹೃದಯಸ್ಪರ್ಶಿಯಾಗಿದೆ ’’ ಎಂದವರು ಹೇಳಿದ್ದಾರೆ.
ಕಳೆದ ವರ್ಷದ ಡಿಸೆಂಬರ್ 30ರಂದು ಇಸ್ರೋ ಸ್ಪೇಡೆಕ್ಸ್ ಮಿಶನ್ ಎಂಬ ಕಾರ್ಯಾಚರಣೆಯಡಿ ಎರಡು ಉಪಗ್ರಹಗಳನ್ನು ಎಸ್ಡಿಎಕ್ಸ್01 ಹಾಗೂ ಎಸ್ಡಿಎಕ್ಸ್ 02 ಎಂಬ ಅವಳಿ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆಗೊಳಿಸಿತ್ತು. ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಪರಸ್ಪರ ಸಂಪರ್ಕ ಸಾಧಿಸುವ ಕುರಿತ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲು ಈ ಉಡಾವಣೆಯನ್ನು ನಡೆಸಲಾಗಿತ್ತು.
ಹಲವಾರು ಪ್ರಯತ್ನಗಳ ಬಳಿಕ ಇಸ್ರೋ ಜನವರಿ 16ರಂದು ಎರಡು ಉಪಗ್ರಹಗಳನ್ನು ಡಾಕಿಂಗ್ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲನ್ನು ಸಾಧಇಸಿತ್ತು. ಎರಡು ಬಾಹ್ಯಾಕಾಶ ನೌಕೆಗಳು ಆಂತರಿಕ್ಷದಲ್ಲಿ ಸಂಪರ್ಕಗೊಂಡು, ಒಂದೇ ಘಟಕವಾಗಿ ಕಾರ್ಯಾರಿಸುವುದನ್ನು ಸ್ಪೇಸ್ ಡಾಕಿಂಗ್ ಎನ್ನಲಾಗುತ್ತದೆ.