ವಂಚನೆ ಪ್ರಕರಣ ರದ್ದುಗೊಳಿಸಿ ದಿಲ್ಲಿ ಪೊಲೀಸರಿಗೆ 48,000 ರೂ. ಮೌಲ್ಯದ ಸಾಕ್ಸ್ ಗಳನ್ನು ದೇಣಿಗೆ ನೀಡಲು ದಿಲ್ಲಿ ಹೈಕೋರ್ಟ್ ಆದೇಶ

Photo: PTI
ಹೊಸದಿಲ್ಲಿ: ದಿಲ್ಲಿ ಹೈಕೋರ್ಟ್ ಇತ್ತೀಚೆಗೆ ವಂಚನೆ, ಫೋರ್ಜರಿ ಹಾಗೂ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪ್ರಥಮ ಮಾಹಿತಿ ವರದಿಯನ್ನು (ಎಫ್ ಐಆರ್) ರದ್ದುಗೊಳಿಸಿದೆ ಹಾಗೂ ದಿಲ್ಲಿ ಪೊಲೀಸ್ ಸಿಬ್ಬಂದಿಗೆ 48,000 ರೂ. ಮೌಲ್ಯದ ಸಮವಸ್ತ್ರ ಸಾಕ್ಸ್ ಗಳನ್ನು ಖರೀದಿಸಲು ಕೇಸ್ ನಲ್ಲಿ ಭಾಗಿಯಾದವರಿಗೆ ನಿರ್ದೇಶಿಸಿದೆ.
ವಿವಾದದ ಕಕ್ಷಿದಾರರು ಇತ್ಯರ್ಥಕ್ಕೆ ಬಂದಿದ್ದಾರೆ ಹಾಗೂ ಕ್ರಿಮಿನಲ್ ವಿಚಾರಣೆಯನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ತಿಳಿಸಿದ ನಂತರ ನ್ಯಾಯಮೂರ್ತಿ ಸೌರಭ್ ಬ್ಯಾನರ್ಜಿ ಈ ಆದೇಶವನ್ನು ನೀಡಿದರು.
ನ್ಯಾಯಾಲಯವು ಸಲ್ಲಿಕೆಯನ್ನು ಗಮನಿಸಿದೆ ಹಾಗೂ ಎಫ್ಐಆರ್ ನ ಮುಂದುವರಿಕೆ ನಿರರ್ಥಕತೆವಾಗಿದೆ ಎಂದು ಹೇಳಿದೆ.
ಕೇಶವಪುರಂ, ಭಾರತ್ನಗರ, ಮಾಡೆಲ್ ಟೌನ್, ಅಶೋಕ್ ವಿಹಾರ್, ರೂಪ್ ನಗರ್ ಹಾಗೂ ಮಾರಿಸ್ ನಗರ ಪೊಲೀಸ್ ಠಾಣೆಗಳಲ್ಲಿರುವ ಪೊಲೀಸ್ ಸಿಬ್ಬಂದಿಗೆ ಸಮವಸ್ತ್ರದ ಸಾಕ್ಸ್ ಖರೀದಿಸಲು 48,000 ರೂ. ಮೊತ್ತವನ್ನು ಒಟ್ಟುಗೂಡಿಸುವಂತೆ ದೂರುದಾರರಿಗೆ ಹಾಗೂ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಆದೇಶಿಸಿದೆ. ನಂತರ ಪ್ರಕರಣವನ್ನು ರದ್ದುಪಡಿಸಲು ಮುಂದಾಯಿತು.





