ಪತನಗೊಂಡ ಏರ್ ಇಂಡಿಯಾ ವಿಮಾನದ ಅವಶೇಷಗಳಡಿ ಮತ್ತೊಂದು ಮೃತದೇಹ ಪತ್ತೆ

Photo credit: PTI
ಅಹಮದಾಬಾದ್: ಶನಿವಾರ ರಕ್ಷಣಾ ಪಡೆಗಳು ಏರ್ ಇಂಡಿಯಾ AI-171 ವಿಮಾನದ ಬಾಲ ಭಾಗದಿಂದ ಮತ್ತೊಂದು ಶವವನ್ನು ಹೊರತೆಗೆದಿದ್ದಾರೆ ಎಂದು ವರದಿಯಾಗಿದೆ
ಗುರುವಾರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ವಿಮಾನವು 33 ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಗಿತ್ತು.
ಮೇಘಾನಿ ನಗರ ಪ್ರದೇಶದ ವೈದ್ಯಕೀಯ ಕಾಲೇಜಿನ ಬಳಿಯ ವೈದ್ಯರ ಹಾಸ್ಟೆಲ್ನ ಮೇಲ್ಛಾವಣಿಯಲ್ಲಿ ಹುದುಗಿದ್ದ ವಿಮಾನದ ಬಾಲದ ಭಾಗದಲ್ಲಿ ಶವ ಸಿಲುಕಿಕೊಂಡಿತ್ತು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ವಿಮಾನದ ಅಪಘಾತ ಸ್ಥಳದಿಂದ ಪತ್ತೆಯಾದ ಅವಶೇಷಗಳ ಡಿಎನ್ಎ ವಿಶ್ಲೇಷಣೆಯನ್ನು ಗಮನಾರ್ಹವಾಗಿ ವೇಗಗೊಳಿಸಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ, ಮೂರು ದಿನಗಳಲ್ಲಿ ಗುರುತಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದ್ದಾರೆ.
ಏರ್ ಇಂಡಿಯಾ ವಿಮಾನವು 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ನಾಗರಿಕರು, ಏಳು ಪೋರ್ಚುಗೀಸ್ ಮತ್ತು ಒಬ್ಬ ಕೆನಡಾದವರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ಯುತ್ತಿತ್ತು. 11A ಸೀಟಿನಲ್ಲಿ ಕುಳಿತಿದ್ದ ಒಬ್ಬ ಬ್ರಿಟಿಷ್ ಪ್ರಜೆ ವಿಶ್ವಶ್ ಕುಮಾರ್ ರಮೇಶ್ ಮಾತ್ರ ಅಪಘಾತದಿಂದ ಬದುಕುಳಿದವರಾಗಿದ್ದಾರೆ.





