ತೆಲಂಗಾಣ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ ಸ್ವೀಕರಿಸಿದ ಅಕ್ಬರುದ್ದೀನ್ ಉವೈಸಿ

Photo: ANI
ಹೈದರಾಬಾದ್: ತೆಲಂಗಾಣ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಉವೈಸಿ ಇಂದು ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಎಂದು aninews.in ವರದಿ ಮಾಡಿದೆ.
ಅಕ್ಬರುದ್ದೀನ್ ಉವೈಸಿ ಅವರಿಗೆ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡಾ ಉಪಸ್ಥಿತರಿದ್ದರು.
ಎಐಎಂಐಎಂ ಶಾಸಕ ಅಕ್ಬರುದ್ದೀನ್ ಉವೈಸಿಯನ್ನು ತೆಲಂಗಾಣ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ರಾಜ್ಯಪಾಲ ತಮಿಳ್ ಸಾಯಿ ಸೌಂದರ್ ರಾಜನ್ ಶುಕ್ರವಾರ ನೇಮಕ ಮಾಡಿದ್ದರು. ಮೂರನೆ ಅವಧಿಯ ತೆಲಂಗಾಣ ವಿಧಾನಸಭೆಯ ಅಧಿವೇಶನವು ಇಂದಿನಿಂದ (ಶನಿವಾರ) ಪ್ರಾರಂಭಗೊಳ್ಳಲಿದೆ.
ಹಂಗಾಮಿ ಸ್ಪೀಕರ್ ಅವಧಿಯು ತಾತ್ಕಾಲಿಕವಾಗಿದ್ದು, ನೂತನವಾಗಿ ಚುನಾಯಿತವಾದ ಶಾಸಕರಿಗೆ ಪ್ರತಿಜ್ಞಾ ವಿಧಿ ಬೋಧಿಸುವುದಕ್ಕೆ ಹಾಗೂ ನೂತನ ಸ್ಪೀಕರ್ ಆಯ್ಕೆಯಾಗುವವರೆಗೆ ಮಾತ್ರ ಅವರ ಅಧಿಕಾರಾವಧಿ ಸೀಮಿತವಾಗಿರುತ್ತದೆ.
Next Story





