ವಿರಳ ಖನಿಜ ಕ್ಷೇತ್ರದಲ್ಲಿ ‘ಆತ್ಮನಿರ್ಭರತೆ’ಯ ಗುರಿ; REPM ಲೋಹಗಳ ಉತ್ಪಾದನೆ ಉತ್ತೇಜನಕ್ಕೆ 7200 ಕೋ.ರೂ. ಯೋಜನೆ

Credit :thehindu.com
ಹೊಸದಿಲ್ಲಿ,ನ.26: ವಿರಳ ಖನಿಜಗಳನ್ನು ದೇಶಿಯವಾಗಿ ಉತ್ಪಾದಿಸುವ ಭಾರತದ ಸಾಮರ್ಥ್ಯವನ್ನು ಉತ್ತೇಜಿಸುವ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ನೇತತೃತ್ವದ ಕೇಂದ್ರ ಸಂಪುಟವು 7200 ಕೋಟಿ ರೂ.ಗೂ ಅಧಿಕ ಮೊತ್ತದ REPM (ರೇರ್ ಆರ್ಥ್ ಪರ್ಮಾನೆಂಟ್ ಮ್ಯಾಗ್ನೆಟ್) ಯೋಜನೆಗೆ ಅನುಮೋದನೆ ನೀಡಿದೆ. ವಾರ್ಷಿಕವಾಗಿ 6 ಸಾವಿರ ಮೆಟ್ರಿಕ್ಟನ್ (ಎಂಟಿಪಿಎ) ಸಾಮರ್ಥ್ಯದ REPM ಲೋಹಗಳ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ವಿರಳ ಖನಿಜಗಳ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯನ್ನು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಅದರ ಉಪಸ್ಥಿತಿಯನ್ನು ಬಲಪಡಿಸುವ ಭರವಸೆಯನ್ನ್ನು ಈ ಉಪಕ್ರಮವು ಹೊಂದಿದೆ.
REPM ಲೋಹಗಳು, ಭೂಮಿಯಲ್ಲಿ ಲಭ್ಯವಿರುವ ಅತ್ಯಂತ ಶಕ್ತಿಶಾಲಿಯಾದ ಆಯಸ್ಕಾಂತಗಳಾಗಿವೆ. ವಿದ್ಯುತ್ಚಾಲಿತ ವಾಹನಗಳು, ಪುನರ್ನವೀಕರಣ ಯೋಗ್ಯ ಇಂಧನ, ಇಲೆಕ್ಟ್ರಾನಿಕ್ಸ್,ವ್ಯೋಮಯಾನ ಹಾಗೂ ರಕ್ಷಣಾ ಕೈಗಾರಿಕೆಗಳು ಸೇರಿದಂತೆ ವಿವಿಧ ಉತ್ಪಾದನಾ ವಲಯಗಳಿಗೆ ಇವು ಅತ್ಯವಶ್ಯವಾಗಿವೆ.
ಪ್ರಸಕ್ತ ಭಾರತವು ತನ್ನ REPM ಲೋಹಗಳನ್ನು ತನ್ನ ಅಗತ್ಯಕ್ಕಾಗಿ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ.
REPM ಉತ್ಪಾದನಾ ಘಟಕಗಳ ಸ್ಥಾಪನೆಯ ಯೋಜನೆಯಿಂದಾಗಿ, ದೇಶದಲ್ಲಿ ಉದ್ಯೋಗ ಸೃಷ್ಟಿ, ಸ್ವಾವಲಂಬನೆಯ ವರ್ಧನೆಗೆ ಸಹಕಾರಿಯಾಗಲಿದೆ.
ಪ್ರಸಕ್ತ ಭಾರತವು REPM ಲೋಹವನ್ನು ಪ್ರಮುಖವಾಗಿ ಚೀನಾದಿಂದ ಆಮದು ಮಾಡಿಕೊಳ್ಳುತ್ತಿದೆ.







