ಫೆ. 1ರಿಂದ ಏರ್ ಇಂಡಿಯಾದಿಂದ ಭಾರತ-ಚೀನಾ ವಿಮಾನ ಪುನಾರಂಭ

ಏರ್ ಇಂಡಿಯಾ | Photo Credit : PTI
ಹೊಸದಿಲ್ಲಿ, ನ. 17: ದಿಲ್ಲಿ ಹಾಗೂ ಶಾಂಘಾಯಿ ನಡುವೆ 2026 ಫೆಬ್ರವರಿ 1ರಿಂದ ನಿಲುಗಡೆ ರಹಿತ ವಿಮಾನಗಳ ಹಾರಾಟ ಪುನಾರಂಭವಾಗಲಿದೆ ಎಂದು ಏರ್ ಇಂಡಿಯಾ ಸೋಮವಾರ ಪ್ರಕಟಿಸಿದೆ.
ಮುಂದಿನ ವರ್ಷ ಮುಂಬೈ ಹಾಗೂ ಶಾಂಘಾಯಿ ನಡುವೆ ನಿಲುಗಡೆ ರಹಿತ ವಿಮಾನಗಳನ್ನು ಆರಂಭಿಸುವ ಉದ್ದೇಶವನ್ನು ಕೂಡ ಏರ್ ಇಂಡಿಯಾ ಹೊಂದಿದೆ. ಪ್ರಾಧಿಕಾರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಏರ್ ಇಂಡಿಯಾ ಹೇಳಿದೆ.
Next Story





