ಪಶ್ಚಿಮ ಏಶ್ಯ ಬಿಕ್ಕಟ್ಟು | ವಿಮಾನ ಪ್ರಯಾಣ ದರಕ್ಕೆ ಸರ್ಚಾರ್ಜ್ ವಿಧಿಸಲು ಏರ್ ಇಂಡಿಯಾ ನಿರ್ಧಾರ

ಏರ್ ಇಂಡಿಯಾ | Photo Credit : PTI
ಹೊಸದಿಲ್ಲಿ: ಪಶ್ಚಿಮ ಏಶ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವೈಮಾನಿಕ ಇಂಧನ (ಎಟಿಎಫ್)ದ ದರದಲ್ಲಿ ಭಾರೀ ಏರಿಕೆಯಾಗಿರುವುದರಿಂದ ತನ್ನ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣದ ಮೇಲೆ ಇಂಧನ ಮೇಲ್ತೆರಿಗೆ (ಸರ್ಚಾರ್ಜ್)ಯನ್ನು ವಿಧಿಸುವುದಾಗಿ ಏರ್ ಇಂಡಿಯಾ ಮಂಗಳವಾರ ತಿಳಿಸಿದೆ.
ಮಾರ್ಚ್ 2026ರ ಆರಂಭದಲ್ಲಿ ಪಶ್ಚಿಮ ಏಶ್ಯದಲ್ಲಿ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಆರಂಭಿಸಿದ ಬಳಿಕ ತೈಲ ಪೂರೈಕೆಗೆ ಅಡಚಣೆಯಾಗುತ್ತಿದ್ದು, ತೈಲ ದರ ಭಾರೀ ಏರಿಕೆ ಕಂಡಿದೆ. ಪರಿಷ್ಕೃತ ಮೇಲ್ತೆರಿಗೆಯನ್ನು ತನ್ನ ವಿವಿಧ ವಿಮಾನಯಾನ ಮಾರ್ಗ ಜಾಲಗಳಿಗೆ ಮೂರು ಹಂತಗಳಲ್ಲಿ ಜಾರಿಗೆ ತರುವುದಾಗಿ ಏರ್ ಇಂಡಿಯಾ ತಿಳಿಸಿದೆ.
Next Story





