ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ

PC : X
ಹೊಸದಿಲ್ಲಿ: ಏರ್ ಇಂಡಿಯಾ ವಿಮಾನವೊಂದು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಅಪರಾಹ್ನ ಇಳಿಯುತ್ತಿರುವ ಸಂದರ್ಭ ಬೆಂಕಿ ಕಾಣಿಸಿಕೊಂಡಿದೆ.
ಹಾಂಗ್ ಕಾಂಗ್ನಿಂದ ಆಗಮಿಸಿದ ಈ ವಿಮಾನದ ಸಹಾಯಕ ವಿದ್ಯುತ್ ಘಟಕ (ಎಪಿಯು)ದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಏರ್ಬಸ್ ಎ321ನ ವಿಮಾನ ಎಐ 315 ರಾತ್ರಿ 12.12ಕ್ಕೆ ಇಳಿಯಿತು ಹಾಗೂ ಪಾರ್ಕಿಂಗ್ ಗೇಟ್ ಸಮೀಪ ತಲುಪಿತು. ಈ ಸಂದರ್ಭ ಎಪಿಯುನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಪ್ರಯಾಣಿಕರು ವಿಮಾನದಿಂದ ಇಳಿಯುತ್ತಿರುವ ಸಂದರ್ಭ ಘಟನೆ ನಡೆದಿದೆ. ಸಿಸ್ಟಮ್ ವಿನ್ಯಾಸದ ಪ್ರಕಾರ ಎಪಿಯು ಸ್ವಯಂಚಾಲಿತವಾಗಿ ಸ್ಥಗಿತಗೊಂಡಿದೆ ಎಂದು ಏರ್ ಇಂಡಿಯಾದ ವಕ್ತಾರ ತಿಳಿಸಿದ್ದಾರೆ.
ವಿಮಾನಕ್ಕೆ ಸ್ವಲ್ಪ ಹಾನಿಯಾಗಿದೆ. ಆದರೆ, ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ತನಿಖೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
Next Story





