ಏರ್ ಇಂಡಿಯಾ ವಿಮಾನ ಪತನ | ಅಪಾಯವನ್ನು ಸೂಚಿಸುವ ‘ಮೇಡೇ’ ಸಂದೇಶ ರವಾನಿಸಿದ್ದ ಪೈಲಟ್

PC : PTI
ಹೊಸದಿಲ್ಲಿ: ಏರ್ ಇಂಡಿಯಾದ ಏಐ 171 ವಿಮಾನವು, ಗುಜರಾತ್ನ ಅಹ್ಮದಾಬಾದ್ನಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲ್ ಅಂತಾರಾಷ್ಟೀಯ ವಿಮಾನನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳ ಬಳಿಕ ವಿಮಾನದ ಪೈಲಟ್ ಅವರು ವಿಮಾನಸಂಚಾರ ನಿಯಂತ್ರಣಕೇಂದ್ರ (ಏರ್ಟ್ರಾಫಿಕ್ ಕಂಟ್ರೋಲ್)ಕ್ಕೆ ಅತ್ಯಂತ ಅಪಾಯದಲ್ಲಿ ಸಿಲುಕಿರುವುದನ್ನು ಸೂಚಿಸುವ ‘‘ಮೇಡೇ’’ ಸಂದೇಶವನ್ನು ಕಳುಹಿಸಿದ್ದಾನೆಂದು ತಿಳಿದುಬಂದಿದೆ.
ಆದಾಗ್ಯೂ, ಈ ವಿಮಾನಕ್ಕೆ ವಾಯುನಿಯಂತ್ರಣ ಕೇಂದ್ರವು ಕಳುಹಿಸಿದ ಮರುಸಂದೇಶವನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲವೆಂದು ನಾಗರಿಕ ವಾಯುಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹೇಳಿಕೆಯೊಂದರಲ್ಲಿ ತಿಳಿಸಿದೆ.
ತುರ್ತು ಸಂದರ್ಭಗಳಲ್ಲಿ ಪೈಲಟ್ಗಳು ರೇಡಿಯೊ ಸಂವಹನಗಳ ಮೂಲಕ ಕಳುಹಿಸುವ ಸಂದೇಶವನ್ನು ‘‘ಮೇಡೇ’’ ಕರೆ ಎನ್ನಲಾಗುತ್ತದೆ. ವಿಮಾನವು ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವುದನ್ನು ಅದು ಸೂಚಿಸುತ್ತದೆ.
Next Story





