ಏರ್ ಇಂಡಿಯಾ ವಿಮಾನ ದುರಂತ | ಸಹ ಪೈಲಟ್ ಕುಂದರ್ ಮೃತದೇಹ ಸ್ವಗೃಹಕ್ಕೆ, ಸೆವ್ರಿಯಲ್ಲಿ ಅಂತ್ಯಕ್ರಿಯೆ

Photo:X/@radhika1705
ಮುಂಬೈ : ಜೂನ್ 12ರಂದು ಅಹ್ಮದಾಬಾದ್ನಲ್ಲಿ ಪತನವಾದ ಏರ್ ಇಂಡಿಯಾ AI-171 ವಿಮಾನದ ಸಹ ಪೈಲಟ್ ಕ್ಲೈವ್ ಕುಂದರ್ ಅವರ ಮೃತದೇಹವನ್ನು ಗುರುವಾರ ಮುಂಬೈನಲ್ಲಿರುವ ಅವರ ನಿವಾಸಕ್ಕೆ ತರಲಾಗಿದೆ.
ಮಧ್ಯಾಹ್ನ 1ಗಂಟೆವರೆಗೆ ಕುಂದರ್ ಅವರ ಮೃತದೇಹವನ್ನು ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಯಿತು. ಅವರ ಅಂತಿಮ ಸಂಸ್ಕಾರ ಸೆವ್ರಿ ಕ್ರಿಶ್ಚಿಯನ್ ಸ್ಮಶಾನದಲ್ಲಿ ನಡೆಯಲಿದೆ.
ಕುಂದರ್ ಅವರು ಮುಂಬೈನ ಗುರ್ಗಾಂವ್ನಲ್ಲಿ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದರು.
ಜೂನ್ 12ರಂದು 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಎಐ –171 ಅಹ್ಮದಾಬಾದ್ನಿಂದ ಲಂಡನ್ಗೆ ಹಾರಾಟ ನಡೆಸುತ್ತಿದ್ದಾಗ ಬಿಜೆ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ಗೆ ಅಪ್ಪಳಿಸಿತ್ತು. ವಿಮಾನ ಟೇಕ್ಆಫ್ ಆದ ಕೆಲವೇ ಕ್ಷಣಗಳಲ್ಲಿ ನಡೆದಿದ್ದ ಈ ದುರಂತದಲ್ಲಿ ಓರ್ವ ಪ್ರಯಾಣಿಕನನ್ನು ಹೊರತುಪಡಿಸಿ ಎಲ್ಲರೂ ಮೃತಪಟ್ಟಿದ್ದರು.
ಈ ವಿಮಾನದಲ್ಲಿ ಕುಂದರ್ ಸಹ ಪೈಲಟ್ ಆಗಿದ್ದರು. ಇವರು 1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು.
Next Story





