ಭಾಷಾ ವಿವಾದ | ಸ್ಥಳೀಯ ಭಾಷೆಯನ್ನು ಗೌರವಿಸಿ ಕಲಿಯಲು ಪ್ರಯತ್ನಿಸಿ: ಮರಾಠಿಯೇತರ ಭಾಷಿಕರಿಗೆ ಅಜಿತ್ ಪವಾರ್ ಆಗ್ರಹ

Photo | indiatoday
ಹೊಸದಿಲ್ಲಿ: ಮರಾಠಿಯೇತರ ಭಾಷಿಕರು ಸ್ಥಳೀಯ ಭಾಷೆಯ ಬಗ್ಗೆ ಸೂಕ್ಷ್ಮತೆ ಮತ್ತು ಗೌರವ ಭಾವ ಹೊಂದಿರಬೇಕು ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ʼನೀವು ಮರಾಠಿಯನ್ನು ಸ್ವೀಕರಿಸಿ ಅದನ್ನು ಕಲಿಯುವ ಬಯಕೆ ವ್ಯಕ್ತಪಡಿಸಬೇಕು. ರಾಜ್ಯದಲ್ಲಿ ಉದ್ಭವಿಸುತ್ತಿರುವ ಭಾಷಾ ವಿವಾದದಿಂದ ಅನಗತ್ಯ ಸಂಘರ್ಷವನ್ನು ಸರಳ ವರ್ತನೆಯ ಮೂಲಕ ತಡೆಗಟ್ಟಬಹುದಾಗಿದೆ. ನಾವು ಮಹಾರಾಷ್ಟ್ರದಲ್ಲಿ ಜೀವಿಸುತ್ತಿದ್ದರೂ, ನಾವು ಒಳ್ಳೆಯ ಮರಾಠಿಯನ್ನು ಮಾತನಾಡಲು ಸಾಧ್ಯವಿಲ್ಲ. ಆದರೆ, ನಾವು ಮರಾಠಿಯನ್ನು ಗೌರವಿಸುತ್ತೇವೆ ಹಾಗೂ ಅದನ್ನು ಕಲಿಯಲು ಪ್ರಯತ್ನಿಸುತ್ತೇವೆ ಎಂದು ಯಾರಾದರೂ ಹೇಳಿದರೆ ಏನೂ ಆಗುವುದಿಲ್ಲ” ಎಂದು ಅಜಿತ್ ಪವಾರ್ ಹೇಳಿದ್ದಾರೆ.
“ಯಾರೇ ಆದರೂ ತಾವು ವಾಸಿಸುತ್ತಿರುವ ರಾಜ್ಯದಲ್ಲಿನ ಭಾಷೆಗೆ ಗೌರವ ನೀಡಬೇಕು. ಆದರೆ, ಇದು ಎಲ್ಲ ಸಮಯದಲ್ಲೂ ಆಗುವುದಿಲ್ಲ. ಹಲವು ಬಾರಿ ಜನರು ಕೆಟ್ಟದಾಗಿ ವರ್ತಿಸುತ್ತಾರೆ. ಆದರೆ, ನೀವು ಜೀವಿಸುತ್ತಿರುವ ರಾಜ್ಯದ ಭಾಷೆಯನ್ನು ನೀವು ಕೊಂಚವಾದರೂ ಗೌರವಿಸಬೇಕು” ಎಂದು ಅಜಿತ್ ಪವಾರ್ ಹೇಳಿದ್ದಾರೆ.





