ಕೇರಳ | ದೇಶ ವಿರೋಧಿ ಹೇಳಿಕೆ ಆರೋಪ; ಕಿರುತೆರೆ ನಟ ಅಖಿಲ್ ಮಾರಾರ್ ವಿರುದ್ಧ ಪ್ರಕರಣ ದಾಖಲು

ಅಖಿಲ್ ಮಾರಾರ್ | PC : X
ಕೊಲ್ಲಂ: ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ಆರೋಪದಲ್ಲಿ ಮಲೆಯಾಳಂ ಕಿರುತೆರೆ ನಟ ಹಾಗೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಅಖಿಲ್ ಮಾರಾರ್ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್)ಯ ಸೆಕ್ಷನ್ 152ರ ಅಡಿಯಲ್ಲಿ ಅಖಿಲ್ ಮಾರಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೊಟ್ಟಾರಕ್ಕರ ಪೊಲೀಸ್ ಠಾಣೆಯ ಅಧಿಕಾರಿ ಬುಧವಾರ ತಿಳಿಸಿದ್ದಾರೆ.
ಕೊಟ್ಟಾರಕರದ ಸ್ಥಳೀಯ ಬಿಜೆಪಿ ನಾಯಕ ಅನೀಶ್ ಕಿಝಕ್ಕೆಕ್ಕರ ಅವರು ಈ ದೂರು ದಾಖಲಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಅಖಿಲ್ ಮಾರಾರ್ ಅವರ ವೀಡಿಯೊ ದೇಶ ವಿರೋಧಿ ಹೇಳಿಕೆಯನ್ನು ಒಳಗೊಂಡಿದೆ ಎಂದು ದೂರಿನಲ್ಲಿ ಅವರು ಆರೋಪಿಸಿದ್ದಾರೆ.
ನಾವು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದೇವೆ. ವೀಡಿಯೊ ಅಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story