ಎಸ್ಐಆರ್ ಆಟ ಮತ್ತೆ ನಡೆಯಲು ಬಿಡುವುದಿಲ್ಲ: ಅಖಿಲೇಶ್ ಯಾದವ್

ಅಖಿಲೇಶ್ ಯಾದವ್ | Photo Credit : PTI
ಲಕ್ನೊ, ನ. 14: ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ನಡೆಸಲಾದ ಆಟವನ್ನು ಇನ್ನು ಮುಂದೆ ಇತರ ರಾಜ್ಯಗಳಲ್ಲಿ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಶುಕ್ರವಾರ ಆರೋಪಿಸಿದ್ದಾರೆ.
‘ಎಕ್ಸ್’ನ ಪೋಸ್ಟ್ನಲ್ಲಿ ಅಖಿಲೇಶ್ ಯಾದವ್, ಬಿಹಾರದಲ್ಲಿ ಎಸ್ಐಆರ್ ಮೂಲಕ ನಡೆಸಿದ ಆಟ ಈಗ ಬಹಿರಂಗಗೊಂಡಿದೆ. ಪಶ್ಚಿಮಬಂಗಾಳ, ತಮಿಳುನಾಡು, ಉತ್ತರಪ್ರದೇಶ ಹಾಗೂ ಇತರ ಯಾವುದೇ ರಾಜ್ಯಗಳಲ್ಲಿ ಅಂತಹ ಚುನಾವಣಾ ಪಿತೂರಿಗಳು ಸಾಧ್ಯವಾಗಲಾರದುʼ, ಎಂದು ಹೇಳಿದ್ದಾರೆ.
ಸಿಸಿಟಿವಿಯಂತೆ ನಮ್ಮ ಪಿಪಿಟಿವಿ, ಅಥವಾ ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಪ್ರಹಾರಿ (ಕಾವಲು ಸಂಸ್ಥೆ) ಜಾಗರೂಕವಾಗಿದ್ದು, ಬಿಜೆಪಿಯ ತಂತ್ರಗಳನ್ನು ವಿಫಲಗೊಳಿಸುತ್ತದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಒಂದು ಪಕ್ಷವಲ್ಲ. ಬದಲಾಗಿ ಅದು ವಂಚಕ ಪಕ್ಷ ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
Next Story





