ಅಕ್ಟೋಬರ್ 3ರ ಭಾರತ್ ಬಂದ್ ಮುಂದೂಡಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ಹೊಸದಿಲ್ಲಿ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಅಕ್ಟೋಬರ್ 3ರಂದು ಕರೆ ನೀಡಿದ್ದ ಭಾರತ್ ಬಂದ್ ಮುಂದೂಡಿದೆ. ಬಂದ್ ಗೆ ಕರೆ ನೀಡಿದ ದಿನ ಕೆಲ ರಾಜ್ಯಗಳಲ್ಲಿ ಧಾರ್ಮಿಕ ಹಬ್ಬಗಳು ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.
ಮಂಡಳಿಯ ಅಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಅವರ ಅಧ್ಯಕ್ಷತೆಯಲ್ಲಿ ಕರೆಯಲಾದ ತುರ್ತು ಸಭೆಯಲ್ಲಿ ಪರಿಸ್ಥಿತಿಯನ್ನು ವಿಶ್ಲೇಷಿಸಿ, ಬಂದ್ ಮುಂದೂಡಬೇಕೆಂಬ ನಿರ್ಧಾರವನ್ನು ಪದಾಧಿಕಾರಿಗಳು ಏಕಮತದಿಂದ ಅಂಗೀಕರಿಸಿದರು. ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.
ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ AIMPLB ಆರಂಭಿಸಿರುವ ಹೋರಾಟ ಮತ್ತು ಇತರ ಕಾರ್ಯಕ್ರಮಗಳು ಈ ಹಿಂದೆ ಘೋಷಣೆ ಮಾಡಿರುವಂತೆಯೇ ಮುಂದುವರಿಯಲಿವೆ ಎಂದು ಮಂಡಳಿ ತಿಳಿಸಿದೆ.
Next Story





