ಸಂಭಾಲ್ | ಮಸೀದಿ ಧ್ವಂಸ ಕಾರ್ಯಾಚರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ

ಅಲಹಾಬಾದ್ ಹೈಕೋರ್ಟ್ | PC : PTI
ಲಕ್ನೋ,ಅ.4: ಉತ್ತರಪ್ರದೇಶದ ಸಂಭಾಲ್ನಲ್ಲಿ ಸರಕಾರಿ ನಿವೇಶನದಲ್ಲಿ ನಿರ್ಮಿಸಲಾಗಿದೆಯೆನ್ನಲಾದ ಮಸೀದಿ, ಮದುವೆಹಾಲ್ ಹಾಗೂ ಆಸ್ಪತ್ರೆಯನ್ನು ಬುಲ್ಡೋಝರ್ ಮೂಲಕ ನೆಲಸಮಗೊಳಿಸುವ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಲು ಅಲಹಾಬಾದ್ ಹೈಕೋರ್ಟ್ ಶನಿವಾರ ನಿರಾಕರಿಸಿದೆ.
ಮಸೀದಿಯನ್ನು ಬುಲ್ಡೋಝರ್ ಮೂಲಕ ನೆಲಸಮಗೊಳಿಸುವ ಜಿಲ್ಲಾಡಳಿತದ ನಿರ್ಧಾರವನ್ನು ಪ್ರಶ್ನಿಸಿ ಮಸೀದಿಯ ಮುತವಲ್ಲಿ ಮಿಂಜಾರ್ ಹುಸೈನ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ದಿನೇಶ್ ಪಾಠಕ್ ಅವರ ಏಕಸದಸ್ಯ ನ್ಯಾಯಪೀಠ ನಡೆಸಿತ್ತು.
ಈ ಮಸೀದಿಯು ಸಂಭಾಲ್ ನಗರದಿಂದ 30 ಕಿ.ಮೀ. ದೂರದ ಅಸ್ಮೋಲಿ ಪ್ರದೇಶದ ರಾಯನ್ ಬುಝುರ್ಗ್ ಗ್ರಾಮದಲ್ಲಿದೆ.
ಇತ್ತಂಡಗಳ ವಾದವನ್ನು ಆಲಿಸಿದ ಬಳಿಕ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತು ಹಾಗೂ ಸಕ್ಷಮ ಕೆಳನ್ಯಾಯಾಲಯದಲ್ಲಿ ಮಸೀದಿ ನೆಲಸಮ ಕಾರ್ಯಾಚರಣೆಗೆ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಬಹುದೆಂದು ತಿಳಿಸಿತು.
Next Story





