FCRA ಉಲ್ಲಂಘನೆ ಆರೋಪ| ಎನ್ಜಿಒ ಎನ್ವಿರೊನಿಕ್ಸ್ ನೋಂದಣಿ ರದ್ದು: ಕೇಂದ್ರದ ಪ್ರತಿಕ್ರಿಯೆ ಕೇಳಿದ ದಿಲ್ಲಿ ಹೈಕೋರ್ಟ್

ದಿಲ್ಲಿ ಹೈಕೋರ್ಟ್ | Photo : PTI
ಹೊಸದಿಲ್ಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (FCRA)ಯಡಿ ತನ್ನ ನೋಂದಣಿಯನ್ನು ರದ್ದುಪಡಿಸಿದ ಕೇಂದ್ರ ಸರಕಾರದ ಕ್ರಮವನ್ನು ಪ್ರಶ್ನಿಸಿ ಎನ್ಜಿಒ ಎನ್ವಿರೊನಿಕ್ಸ್ ಟ್ರಸ್ಟ್ ಸಲ್ಲಿಸಿದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ಶನಿವಾರ ವಿಚಾರಣೆಗೆ ಸ್ವೀಕರಿಸಿದೆ. ಟ್ರಸ್ಟ್ ಅರ್ಜಿ ಬಗ್ಗೆ ನಾಲ್ಕು ವಾರಗಳೊಳಗೆ ಪ್ರತಿಕ್ರಿಯಿಸುವಂತೆ ಅದು ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ.
ಎಫ್ಸಿಆರ್ಎ ಕಾಯ್ದೆಯಡಿ ತನ್ನ ನೋಂದಣಿಯನ್ನು ರದ್ದುಪಡಿಸಿರುವುದನ್ನು ಪ್ರಶ್ನಿಸಿ ಎನ್ವಿರೊನಿಕ್ಸ್ ಸಂಸ್ಥೆಯು ಈ ವರ್ಷದ ಮಾರ್ಚ್ 4ರಂದು ದಿಲ್ಲಿ ಹೈಕೋರ್ಟ್ ಮೆಟ್ಟಲೇರಿತ್ತು.
ಸಂಸ್ಥೆಯ ಹೇಳಿಕೆಯನ್ನು ಆಲಿಸದೆಯೇ ಕೇಂದ್ರ ಸರಕಾರವು, ನೋಂದಣಿ ರದ್ದತಿಯ ಆದೇಶವನ್ನು ಜಾರಿಗೊಳಿಸಿದೆಯೆಂದು ಎನ್ಜಿಒ ಸಂಸ್ಥೆಯ ಪರ ನ್ಯಾಯವಾದಿ ತಿಳಿಸಿದರು.
ನೋಂದಣಿ ರದ್ದತಿಯ ಆದೇಶವನ್ನು ಜಾರಿಗೊಳಿಸುವ ಮೊದಲು ಅವರು ಸಂಸ್ಥೆಯ ವೈಯಕ್ತಿಕ ಆಲಿಕೆಗೆ ಅವಕಾಶ ನೀಡಬೇಕಿತ್ತು. ಆದರೆ ನಮಗೆ ಯಾವುದೇ ಆಲಿಕೆಗೆ ಅವಕಾಶ ನೀಡಲಾಗಿಲ್ಲ. ಆದುದರಿಂದ ಈ ಆದೇಶವನ್ನು ರದ್ದುಗೊಳಿಸೇಕಿದೆ ಎಂದು ಎನ್ವಿರೊನಿಕ್ಸ್ನ ನ್ಯಾಯವಾದಿಗಳು ಹೇಳಿದರು.
ತನ್ನ ಉದ್ಯೋಗಿಗಳಿಗೆ ವೇತನವನ್ನು ಪಾವತಿಸಲು ತನ್ನ ಖಾತೆಯಲ್ಲಿರುವ ಹಣವನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆಯೂ ಎನ್ಜಿಓ ನ್ಯಾಯಾಲಯವನ್ನು ಕೋರಿತು.
2018ರಲ್ಲಿ ನಡೆಲಾದ ಹಲವಾರು ಬ್ಯಾಂಕ್ ಹಣ ವರ್ಗಾವಣೆಯಲ್ಲಿ ಎಫ್ಸಿಆರ್ಎ ಕಾಯ್ದೆಯ ನಿಯಮಾವಳಿಗಳು ಹಾಗೂ ಉದ್ದೇಶಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಎನ್ವಿರೊನಿಕ್ಸ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು.
2020ರ ನವೆಂಬರ್ 15ರಂದು ಎನ್ವಿರೊನಿಕ್ಸ್ ಟ್ರಸ್ಟ್, ಒಡಿಶಾದಲ್ಲಿ ಆಂಫಾನ್ ಚಂಡಮಾರುತ ಸಂಸ್ತರಿಗೆ ಹಣ ವಿತರಿಸುವ ನೆನಪದಲ್ಲ 711 ಮಂದಿಯ ಪ್ರತಿಯೊಂದು ಬ್ಯಾಂಕ್ ಖಾತೆಗಳಿಗೆ ತಲಾ 1250 ರೂ.ವರ್ಗಾವಣೆ ಮಾಡಲಾಗಿತ್ತು. ಆದರೆ ಈ ಹಣವನ್ನು ವಾಸ್ತವವಾಗಿ ಒಡಿಶಾದ ಧಿನ್ಕಿಯಾದ ಜೆಎಸ್ಡಬ್ಲ್ಯು ಉಕ್ಕಿನ ಕಾರ್ಖಾನೆ ವಿರೋಧಿ ಚಳವಳಿಗಾರರಿಗೆ ಪಾವತಿಸಲಾಗಿತ್ತು.
ಗಲಭೆ ಹಾಗೂ ಕಾನೂನುಬಾಹಿರವಾಗಿ ಜನರನ್ನು ಜಮಾವಣೆಗೊಳಿಸಿದ ಆರೋಪದಲ್ಲಿ ರೂರ್ಕೆಲಾ ಪೊಲೀಸರಿಂದ ಬಂಧಿತಪರಾದ ಆದಿವಾಸಿ ಹೋರಾಟಗಾರ ಡೆಮೆ ಒರಾಂ ಜೊತೆಗೂ ಈ ಟ್ರಸ್ಟ್ ನಂಟು ಹೊಂದಿರುವುದಾಗಿ ಸಿಬಿಐ ಆಪಾದಿಸಿದೆ.







