ಆಸ್ಟ್ರೇಲಿಯದ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಅಲಿಸಾ ಹೀಲಿ
ಅಲಿಸಾ ಹೀಲಿ | Photo: NDTV
ಹೊಸದಿಲ್ಲಿ: ಎಲ್ಲ ಮಾದರಿ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯದ ಮಹಿಳಾ ಕ್ರಿಕೆಟ್ ತಂಡದ ಪೂರ್ಣಕಾಲಿಕ ನಾಯಕಿಯಾಗಿ ಅಲಿಸಾ ಹೀಲಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಿವೃತ್ತಿಯಾಗಿರುವ ಲೆಜೆಂಡರಿ ಆಟಗಾರ್ತಿ ಮೆಗ್ ಲ್ಯಾನಿಂಗ್ರಿಂದ ತೆರವಾದ ನಾಯಕಿಯ ಸ್ಥಾನವನ್ನು ತುಂಬಿದ್ದಾರೆ.
ಈ ತಿಂಗಳಾಂತ್ಯದಲ್ಲಿ ಭಾರತಕ್ಕೆ ಪ್ರವಾಸಕೈಗೊಳ್ಳಲಿರುವ ಆಸೀಸ್ ತಂಡದ ನಾಯಕತ್ವವಹಿಸುವ ಮೂಲಕ ಹೀಲಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಆಸ್ಟ್ರೇಲಿಯವು ಡಿಸೆಂಬರ್ 21ರಂದು ಆರಂಭವಾಗಲಿರುವ ಭಾರತದ ಪ್ರವಾಸದ ವೇಳೆ ಏಕೈಕ ಟೆಸ್ಟ್ ಪಂದ್ಯ, ಮೂರು ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಒಳಗೊಂಡ ಸರಣಿಯಲ್ಲಿ ಆಡಲಿದೆ. ಹೀಲಿ ಈ ಹಿಂದೆ ಇಂಗ್ಲೆಂಡ್, ಐರ್ಲ್ಯಾಂಡ್ ಹಾಗೂ ವೆಸ್ಟ್ಇಂಡೀಸ್ ವಿರುದ್ಧ ಸರಣಿಯಲ್ಲಿ ಆಸೀಸ್ ತಂಡದ ನಾಯಕಿಯಾಗಿದ್ದರು.
ಮುಂದಿನ ವರ್ಷ ಬಾಂಗ್ಲಾದೇಶದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಯು ನಾಯಕಿಯಾಗಿ ಹೀಲಿ ಅವರ ಮೊದಲ ಪ್ರಮುಖ ಸವಾಲಾಗಿದೆ.
Next Story