ಸಿನಿಮಾಟೋಗ್ರಾಫ್ ಕಾಯ್ದೆಗೆ ತಿದ್ದುಪಡಿ: ಪೈರಸಿಗೆ ಮೂರು ವರ್ಷಗಳ ಜೈಲುಶಿಕ್ಷೆ

ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: ಸರಕಾರವು ಸಿನಿಮಾಟೋಗ್ರಾಫ್ ಕಾಯ್ದೆ ತಿದ್ದುಪಡಿ ಮಸೂದೆಯಲ್ಲಿ ಚಲನಚಿತ್ರಗಳ ನಕಲಿ ಪ್ರತಿಗಳನ್ನು ಮಾಡುವ ವ್ಯಕ್ತಿಗೆ ಗರಿಷ್ಠ ಮೂರು ವರ್ಷಗಳ ಜೈಲುಶಿಕ್ಷೆ ಮತ್ತು ಚಿತ್ರದ ನಿರ್ಮಾಣ ವೆಚ್ಚದ ಶೇ.5ರವರೆಗೆ ದಂಡವನ್ನು ಪ್ರಸ್ತಾವಿಸಿದೆ.
ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್ ಅವರು ಗುರುವಾರ ರಾಜ್ಯಸಭೆಯಲ್ಲಿ ಮಂಡಿಸಿರುವ ಸಿನೆಮಾಟೋಗ್ರಾಫ್ (ತಿದ್ದುಪಡಿ) ಮಸೂದೆ-2023 ಸೆನ್ಸಾರ್ ಮಂಡಳಿಯು ಚಲನಚಿತ್ರಗಳಿಗೆ ನೀಡುವ ಪ್ರಮಾಣ ಪತ್ರಕ್ಕೆ 10 ವರ್ಷಗಳ ಸಿಂಧುತ್ವ ಅವಧಿಯನ್ನು ಕೈಬಿಟ್ಟು ಶಾಶ್ವತ ಸಿಂಧುತ್ವವನ್ನು ನೀಡಲೂ ಉದ್ದೇಶಿಸಿದೆ.
ಗುರುವಾರ ರಾಜ್ಯಸಭೆಯಲ್ಲಿ ಪರಿಷ್ಕೃತ ಮಸೂದೆಯನ್ನು ಮಂಡಿಸುವ ಮುನ್ನ ಠಾಕೂರ್ ಸಿನೆಮಾಟೋಗ್ರಾಫ್ (ತಿದ್ದುಪಡಿ) ಮಸೂದೆ-2019ನ್ನು ಹಿಂದೆಗೆದುಕೊಂಡರು.
Next Story





