ಆಧಾರರಹಿತ ಆರೋಪ ಮಾಡುವುದು ಗೃಹಸಚಿವ ಹುದ್ದೆಯಲ್ಲಿರುವ ವ್ಯಕ್ತಿಗೆ ಸೂಕ್ತವಲ್ಲ: ಅಮಿತ್ ಶಾ ಹೇಳಿಕೆಗೆ ಸ್ಟಾಲಿನ್ ಪ್ರತಿಕ್ರಿಯೆ

ಎಂ. ಕೆ. ಸ್ಟಾಲಿನ್ | Photo Credit : PTI
ತಮಿಳುನಾಡಿನಲ್ಲಿ ಹಿಂದುಗಳ ಹಕ್ಕುಗಳನ್ನು ಹತ್ತಿಕ್ಕಲಾಗುತ್ತದೆ ಎಂದಿದ್ದ ಅಮಿತ್ ಶಾ
ದಿಂಡಿಗಲ್: ತಮಿಳುನಾಡಿನಲ್ಲಿ ಹಿಂದುಗಳ ಹಕ್ಕುಗಳನ್ನು ಹತ್ತಿಕ್ಕಲಾಗುತ್ತದೆ ಎಂಬ ಕೇಂದ್ರ ಗೃಹಸಚಿವ ಅಮಿತ್ಶಾ ಅವರ ಆರೋಪವನ್ನು ತಳ್ಳಿಹಾಕಿರುವ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ಅವರು,ಇಂತಹ ಆಧಾರರಹಿತ ಆರೋಪವನ್ನು ಮಾಡುವುದು ಗೃಹಸಚಿವ ಹುದ್ದೆಯಲ್ಲಿರುವ ವ್ಯಕ್ತಿಗೆ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಇಲ್ಲಿ ಸರಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ಟ್ಯಾಲಿನ್,ತನ್ನ ಆಡಳಿತವು ಎಲ್ಲ ಸಮುದಾಯಗಳ ಜನರ ಧಾರ್ಮಿಕ ಹಕ್ಕುಗಳನ್ನು ಗೌರವಿಸಲು ಮತ್ತು ರಕ್ಷಿಸಲು ಬದ್ಧವಾಗಿದೆ ಎಂದು ಒತ್ತಿ ಹೇಳಿದರು. ಶಾ ಹೇಳಿಕೆಗಳು ವಿಭಜನೆಯನ್ನು ಪ್ರಚೋದಿಸುವ ಉದ್ದೇಶ ಹೊಂದಿದ್ದು,ಇಂತಹ ತಂತ್ರಗಳು ತಮಿಳುನಾಡಿನಲ್ಲಿ ವಿಫಲಗೊಂಡಿವೆ ಎಂದು ಪ್ರತಿಪಾದಿಸಿದರು.
ವಿಶೇಷವಾಗಿ ಶಾ ಆರೋಪಗಳನ್ನು ರಾಜ್ಯದಲ್ಲಿ ಶಾಂತಿಯನ್ನು ಕದಡುವ ತಂತ್ರ ಎಂದು ಬಣ್ಣಿಸಿದ ಅವರು,ತನ್ನ ನಾಯಕತ್ವದಡಿ ಇಂತಹ ಸಾಮಾಜಿಕ ವಿಭಜನೆಗಳು ತಲೆದೋರಲು ಅವಕಾಶ ನೀಡುವುದಿಲ್ಲ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.
Next Story





