ಆಂಧ್ರ ಮದ್ಯ ಹಗರಣ ಆರೋಪಿ ಮೈಸೂರಿನಲ್ಲಿ ಬಂಧನ

ಸಾಂದರ್ಭಿಕ ಚಿತ್ರ
ಅಮರಾವತಿ: ಹಿಂದಿನ ವೈಎಸ್ಆರ್ಸಿಪಿ ಅಧಿಕಾರಾವಧಿಯಲ್ಲಿ ನಡೆದಿತ್ತೆನ್ನಲಾದ 3,200 ಕೋಟಿ ರೂ.ಮದ್ಯ ಹಗರಣದ ತನಿಖೆಯನ್ನು ನಡೆಸುತ್ತಿರುವ ರಚಿಸಲಾದ ಆಂಧ್ರಪ್ರದೇಶ ಪೋಲಿಸ್ ವಿಶೇಷ ತನಿಖಾ ತಂಡ(ಸಿಟ್)ವು ಪ್ರಕರಣದ ಆರೋಪಿಗಳ ಪೈಕಿ ಬಾಲಾಜಿ ಗೋವಿಂದಪ್ಪ ಅವರನ್ನು ಮಂಗಳವಾರ ಮೈಸೂರಿನಲ್ಲಿ ಬಂಧಿಸಿದೆ ಎಂದು ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ದೃಢಪಡಿಸಿದ್ದಾರೆ.
ಗೋವಿಂದಪ್ಪ ಭಾರತಿ ಸಿಮೆಂಟ್ ಪ್ರೈ.ಲಿ.ನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.
ಮೂಲಗಳ ಪ್ರಕಾರ ಸಿಟ್ ಅಧಿಕಾರಿಗಳು ಮೂರು ದಿನಗಳ ಹಿಂದೆ ಹೈದರಾಬಾದ್ ನಲ್ಲಿಯ ಗೋವಿಂದಪ್ಪ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು.
ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಈಡಿ)ವು ಇತ್ತೀಚಿಗೆ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದ್ದು, ಇದು ರಾಜ್ಯ ಪೋಲಿಸ್ನ ಆರ್ಥಿಕ ಅಪರಾಧಗಳ ಘಟಕವು ಸೆಪ್ಟಂಬರ್ 2024ರಲ್ಲಿ ದಾಖಲಿಸಿಕೊಂಡಿದ್ದ ಎಫ್ ಐ ಆರ್ ನ್ನು ಆಧರಿಸಿದೆ.
ಕಾಶಿರೆಡ್ಡಿ ರಾಜಶೇಖರ ರೆಡ್ಡಿ ಮದ್ಯ ಹಗರಣದ ಪ್ರಮುಖ ಆರೋಪಿಯಾಗಿದ್ದು, ರಾಜಂಪೇಟ್ ಸಂಸದ ಪಿ.ವಿ.ಮಿಧುನ್ ರೆಡ್ಡಿ,ಮಾಜಿ ವೈಎಸ್ಆರ್ಸಿಪಿ ಸಂಸದ ಎಂ.ವಿಜಯಸಾಯಿ ರೆಡ್ಡಿ ಮತ್ತು ಮಾಜಿ ಐಎಎಸ್ ಅಧಿಕಾರಿ ಧನಂಜಯ ರೆಡ್ಡಿ ಸೇರಿದಂತೆ ಇತರ ಹಲವಾರು ಆರೋಪಿಗಳನ್ನೂ ಎಸ್ ಈ ಟಿ ತನ್ನ ವರದಿಯಲ್ಲಿ ಹೆಸರಿಸಿದೆ.







