ಅಮೆರಿಕದಲ್ಲಿ ಭೀಕರ ಅಪಘಾತ | ಆಂಧ್ರಪ್ರದೇಶ ಮೂಲದ ದಂಪತಿ ಮೃತ್ಯು, ಇಬ್ಬರು ಮಕ್ಕಳಿಗೆ ಗಾಯ

Photo credit: indiatoday.in
ಹೊಸದಿಲ್ಲಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲು ಮೂಲದ ದಂಪತಿ ಅಮೆರಿಕದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಫ್ಟ್ವೇರ್ ಎಂಜಿನಿಯರ್ ಕೃಷ್ಣ ಕಿಶೋರ್ ಮತ್ತು ಪತ್ನಿ ಆಶಾ ಮೃತರು. ವಾಷಿಂಗ್ಟನ್ನಲ್ಲಿ ಈ ಅಪಘಾತ ಸಂಭವಿಸಿದೆ. ಮಕ್ಕಳೊಂದಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿ ಕೃಷ್ಣ ಕಿಶೋರ್ ಮತ್ತು ಪತ್ನಿ ಆಶಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ರ ಮತ್ತು ಪುತ್ರಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದಂಪತಿ ಕೆಲಸದ ನಿಮಿತ್ತ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಸುಮಾರು 10 ದಿನಗಳ ಹಿಂದೆ ಆಂಧ್ರಪ್ರದೇಶದ ಪಾಲಕೊಲ್ಲುಗೆ ಭೇಟಿ ನೀಡಿ ವಾಪಾಸ್ಸಾಗಿದ್ದರು.
Next Story





