ತೆಲಂಗಾಣದ ಬಳಿಕ ರಮಝಾನ್ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಗಳಿಂದ ಬೇಗನೇ ತೆರಳಲು ಅನುಮತಿ ನೀಡಿದ ಆಂಧ್ರಪ್ರದೇಶ ಸರಕಾರ

Photo | Hindustan Times
ಹೊಸದಿಲ್ಲಿ : ತೆಲಂಗಾಣದ ಬಳಿಕ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರಪ್ರದೇಶ ಸರಕಾರ ರಮಝಾನ್ ಉಪವಾಸದ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಗಳಿಂದ ಬೇಗನೆ ತೆರಳಲು ಅನುಮತಿ ನೀಡಿದೆ.
ಚಂದ್ರ ದರ್ಶನದ ಆಧಾರದಲ್ಲಿ ಮಾರ್ಚ್ 1 ಅಥವಾ ಮಾರ್ಚ್ 2ರಂದು ಪವಿತ್ರ ರಮಝಾನ್ ತಿಂಗಳು ಪ್ರಾರಂಭವಾಗಲಿದೆ. ಶಿಕ್ಷಕರು ಸೇರಿದಂತೆ ಮುಸ್ಲಿಂ ಸಮುದಾಯಕ್ಕೆ ಸೇರಿದ ಸರಕಾರಿ ನೌಕರರು, ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡವರು ರಮಝಾನ್ ತಿಂಗಳಲ್ಲಿ ಒಂದು ಗಂಟೆ ಮೊದಲು ತಮ್ಮ ಕಚೇರಿಗಳು ಅಥವಾ ಶಾಲೆಗಳನ್ನು ತೊರೆಯಲು ಅನುಮತಿ ನೀಡಿದೆ.
ಎಲ್ಲಾ ಮುಸ್ಲಿಂ ಸರಕಾರಿ ನೌಕರರು ಅಥವಾ ಶಿಕ್ಷಕರು ಅಥವಾ ಗುತ್ತಿಗೆ – ಹೊರಗುತ್ತಿಗೆ ನೌಕರರು, ನಿಗಮ-ಮಂಡಳಿಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ನೌಕರರು ಪವಿತ್ರ ರಮಝಾನ್ ತಿಂಗಳಲ್ಲಿ ಅಂದರೆ ಮಾರ್ಚ್ 2 ರಿಂದ 30ರವರೆಗೆ ಸಂಜೆ 4 ಗಂಟೆಗೆ ತಮ್ಮ ಕಚೇರಿಗಳು ಅಥವಾ ಶಾಲೆಗಳಿಂದ ಹೊರಹೋಗಲು ಸರಕಾರ ಅನುಮತಿ ನೀಡಿದೆ ಎಂದು ಆಂಧ್ರ ಸರಕಾರದ ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.





