ನಿಯಮ ಮುರಿದರೆ ಶಿಕ್ಷಿಸುವ ಏಳು ಪ್ರಾಣಿ ಪ್ರಬೇಧಗಳು

Photo Credit : Pexels
ಪ್ರಕೃತಿಗೆ ತನ್ನದೇ ಆದ ನಿಯಮವಿದೆ. ಹಾಗೆಯೇ ಕೆಲವು ಪ್ರಾಣಿ ಪ್ರಬೇಧಗಳು ತಮ್ಮದೇ ನಿರ್ದೇಶನಗಳನ್ನು ಹೊಂದಿರುತ್ತವೆ. ಈ ನಿಯಮಗಳು ಪ್ರಬೇಧದ ರಕ್ಷಣೆ, ಆಹಾರ ಮತ್ತು ಅಸ್ತಿತ್ವಕ್ಕೆ ಮುಖ್ಯವಾಗಿರುತ್ತದೆ. ಶ್ರೇಣಿವ್ಯವಸ್ಥೆಯನ್ನು ಕಾಯ್ದುಕೊಳ್ಳುವುದನ್ನು ತೊಡಗಿ ಬೇಟೆಯ ಸಂಪನ್ಮೂಲವನ್ನು ಹಂಚಿಕೊಳ್ಳುವುದು ಮತ್ತು ಸಹಕಾರದಲ್ಲಿ ಬಹುತೇಕ ಪ್ರಬೇಧಗಳು ಸರಾಗವಾಗಿ ಕಾರ್ಯನಿರ್ವಹಿಸಲು ನಿಯಮದಲ್ಲಿ ಸಾಗುತ್ತವೆ. ಈ ಅಲಿಖಿತ ನಿಯಮವನ್ನು ಗುಂಪಿನ ಸದಸ್ಯರು ಮುರಿದಾಗ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸಂಶೋಧನೆಗಳಲ್ಲಿ ತಿಳಿದುಬಂದಿರುವ ಪ್ರಕಾರ ಅನೇಕ ಪ್ರಾಣಿಗಳು ನಿಯಮ ಉಲ್ಲಂಘಿಸಿದ ಸದಸ್ಯರಿಗೆ ಶಿಕ್ಷೆ ವಿಧಿಸುತ್ತವೆ. ಸ್ವಾರ್ಥ ಹಿತಾಸಕ್ತಿಗೆ ಪ್ರೋತ್ಸಾಹ ಕೊಡುವುದಿಲ್ಲ. ಅಂತಹ ಕೆಲವು ಪ್ರಬೇಧಗಳ ವಿವರ ಇಲ್ಲಿದೆ
Photo Credit : en.wikipedia.org
1. ಇರುವೆಗಳು
ಇರುವೆ ಕಾಲನಿಗಳಲ್ಲಿ ಕಟ್ಟುನಿಟ್ಟಾಗಿ ಶ್ರಮ ವಿಭಜನೆಯ ವ್ಯವಸ್ಥೆ ಇರುತ್ತದೆ. ಕೆಲಸ ತಪ್ಪಿಸುವ ಅಥವಾ ಉದ್ದೇಶಿತ ಸಮಯವಲ್ಲದೆ ಇದ್ದಾಗ ಸಂತಾನೋತ್ಪತ್ತಿಗೆ ಪ್ರಯತ್ನಿಸುವ ಇರುವೆಗಳ ಮೇಲೆ ದಾಳಿ ಮಾಡಬಹುದು, ನಿರ್ಬಂಧಿಸಬಹುದು, ಹೊರಹಾಕಬಹುದು ಅಥವಾ ಕೊಲ್ಲಬಹುದು. ಯಾವುದೇ ಸದಸ್ಯನು ಕಾಲನಿಯ ದಕ್ಷತೆಗೆ ಸಮಸ್ಯೆ ಒಡ್ಡದಂತೆ ಈ ಕಟ್ಟುನಿಟ್ಟಾದ ವ್ಯವಸ್ಥೆ ಖಚಿತಪಡಿಸುತ್ತದೆ.
Photo Credit : Pexels
2. ಜೇನುನೊಣಗಳು
ಜೇನುನೊಣಗಳಲ್ಲಿ ಕಾರ್ಮಿಕ ಕಾವಲು ಇರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಒಬ್ಬ ಕೆಲಸಗಾರ ಜೇನುನೊಣ ರಾಣಿಯ ಪ್ರತ್ಯೇಕ ಪಾತ್ರವನ್ನು ಉಲ್ಲಂಘಿಸಿ ಮೊಟ್ಟೆಗಳನ್ನು ಇಟ್ಟರೆ ಇತರ ಕೆಲಸಗಾರರು ತಕ್ಷಣವೇ ಅದನ್ನು ಪತ್ತೆಹಚ್ಚಿ ನಾಶ ಮಾಡುತ್ತವೆ. ಅಂತಹ ನಿಯಮ ಉಲ್ಲಂಘಿಸಿದ ಜೇನುನೊಣಕ್ಕೆ ಕಾವಲುಗಾರರು ಕಿರುಕುಳ ನೀಡಬಹುದು ಮತ್ತು ನಡವಳಿಕೆ ಮುಂದುವರಿಸದಂತೆ ತಡೆಯಬಹುದು.
Photo Credit : en.wikipedia.org
3. ತೋಳಗಳು
ತೋಳಗಳು ಸ್ಪಷ್ಟವಾದ ಶ್ರೇಣಿ ವ್ಯವಸ್ಥೆಯನ್ನು ಅನುಸರಿಸುತ್ತವೆ. ಕೆಳ ಶ್ರೇಣಿಯ ತೋಳ ನಾಯಕತ್ವವನ್ನು ಆಕ್ರಮಣಕಾರಿಯಾಗಿ ಪ್ರಶ್ನಿಸಿದಾಗ ಅಥವಾ ಸಂಘಟಿತ ಬೇಟೆಗೆ ಅಡ್ಡಿ ಮಾಡಿದರೆ ಇತರರು ಅದನ್ನು ಕಚ್ಚಿ ಹೊಡೆದುರುಳಿಸಬಹುದು ಅಥವಾ ತಾತ್ಕಾಲಿಕವಾಗಿ ಶಿಸ್ತು ಕಲಿಸಲು ಗುಂಪಿನಿಂದ ಹೊರಗಿಡಬಹುದು.
Photo Credit : en.wikipedia.org
4. ಮೀರ್ಕ್ಯಾಟ್ಗಳು
ಮೀರ್ಕ್ಯಾಟ್ಗಳು ದಕ್ಷಿಣ ಆಫ್ರಿಕಾದ ಒಂದು ಬಗೆಯ ಮಂಗ. ಇವು ಅಸ್ತಿತ್ವಕ್ಕಾಗಿ ಸಾಂಘಿಕ ಕೆಲಸವನ್ನೇ ಅವಲಂಬಿಸಿವೆ. ಕಾವಲಿನಲ್ಲಿ ವಿಫಲವಾದ ಅಥವಾ ಗುಂಪು ಸಂಕೇತವನ್ನು ಅಲಕ್ಷಿಸಿದ ಮಂಗಗಳನ್ನು ಬೆನ್ನಟ್ಟಿ, ಕಚ್ಚುತ್ತವೆ ಅಥವಾ ಸ್ವಲ್ಪ ಕಾಳ ಬಹಿಷ್ಕಾರ ಹಾಕುತ್ತವೆ. ಸಂತಾನೋತ್ಪತ್ತಿ ಮತ್ತು ಗುಂಪು ಚಲನೆಯಂತಹ ಶಿಸ್ತುಪಾಲನೆಯನ್ನು ಪ್ರಭಾವಿ ಹೆಣ್ಣುಮಂಗಗಳು ನಿರ್ಧರಿಸುತ್ತವೆ.
Photo Credit : en.wikipedia.org
5. ಚಿಂಪಾಂಜಿಗಳು
ಚಿಂಪಾಜಿಂಗಳು ನಿಯಮ ಪಾಲನೆಗೆ ಸಾಮೂಹಿಕ ಶಿಕ್ಷೆ ಕೊಡುತ್ತವೆ. ಆಹಾರ ಕದಿಯುವವರು, ಹಿಂಸಾತ್ಮಕವಾಗಿ ವರ್ತಿಸುವವರು ಮತ್ತು ಸಾಮಾಜಿಕ ರೂಢಿಗಳನ್ನು ಮುರಿಯುವವರು ಗುಂಪಿನ ಸದಸ್ಯರಿಂದ ದಾಳಿಗೆ ಒಳಗಾಗಬಹುದು ಅಥವಾ ಸಾಮಾಜಿಕ ಬಹಿಷ್ಕಾರ ಎದುರಿಸಬಹುದು.
Photo Credit : en.wikipedia.org
6. ಕ್ಲೀನರ್ ಮೀನು
ಕ್ಲೀನರ್ ಫಿಶ್ ಎಂಬ ಪ್ರಬೇಧದ ಮೀನುಗಳು ದೊಡ್ಡ ಮೀನುಗಳಿಂದ ಪರಾವಲಂಬಿಗಳನ್ನು ತೆಗೆದು ಹಾಕುವ ಮೂಲಕ ಪರಸ್ಪರ ಸಂಬಂಧಗಳನ್ನು ಕಾಪಾಡುತ್ತವೆ. ಕ್ಲೀನರ್ ಫಿಶ್ ಆರೋಗ್ಯಕರ ಅಂಗಾಂಶ ಕಚ್ಚಿ ಮೋಸ ಮಾಡಿದರೆ ಕ್ಲೈಂಟ್ ಮೀನು ಅದನ್ನು ಓಡಿಸಬಹುದು ಅಥವಾ ಹಿಂತಿರುಗಲು ಅವಕಾಶ ಕೊಡುವುದಿಲ್ಲ. ನಿಯಮ ಉಲ್ಲಂಘನೆಗೆ ಶಿಕ್ಷೆ ನೀಡುತ್ತದೆ.
Photo Credit : en.wikipedia.org
7. ಕಾಗೆಗಳು
ತಮ್ಮ ಚತುರಬುದ್ಧಿಗೆ ಹೆಸರಾಗಿರುವ ಕಾಗೆಗಳು ಹಲ್ಲೆ ಅಥವಾ ಬಾಯಿಮಾತಲ್ಲಿ ಬೈಯುವ ಮೂಲಕ ಸಾಮಾಜಿಕ ನಿಯಮಗಳನ್ನು ಹೇರುತ್ತವೆ. ಆಕ್ರಮಣಕಾರಿಯಾಗಿ ವರ್ತಿಸುವ ಅಥವಾ ಗುಂಪಿನ ನಿಯಮಗಳನ್ನು ಉಲ್ಲಂಘಿಸುವ ಪಕ್ಷಿಗಳಿಗೆ ಸಾಮೂಹಿಕವಾಗಿ ಕಿರುಕುಳ ನೀಡಬಹುದು ಅಥವಾ ಗುಂಪಿನಿಂದ ಬಹಿಷ್ಕರಿಸಬಹುದು. ಆ ಮೂಲಕ ನಿಯಮ ಪಾಲನೆಯಾಗುತ್ತದೆ.
ಕೃಪೆ: indianexpress.com







