ವಿಪಕ್ಷ ನಾಯಕರ ಐಫೋನ್ ಹ್ಯಾಕ್ ಯತ್ನ ಆರೋಪಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರ
ಆ್ಯಪಲ್ ಎಚ್ಚರಿಕೆ ಸಂದೇಶಗಳನ್ನು 150 ದೇಶಗಳಲ್ಲಿ ನೀಡಲಾಗಿದೆ ಎಂದ ಐಟಿ ಸಚಿವ

ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ (PTI)
ಹೊಸದಿಲ್ಲಿ: ಸರ್ಕಾರ ಪ್ರವರ್ತಿತ ಹ್ಯಾಕರ್ಗಳು ತಮ್ಮ ಐಫೋನ್ಗಳನ್ನು ಹ್ಯಾಕ್ ಮಾಡಲು ಯತ್ನಿಸುತ್ತಿದ್ದಾರೆಂದು ಕೆಲ ವಿಪಕ್ಷ ಸಂಸದರು ತಮಗೆ ಆ್ಯಪಲ್ ಕಂಪನಿಯಿಂದ ಬಂದ ಎಚ್ಚರಿಕೆ ಸಂದೇಶದ ಆಧಾರದಲ್ಲಿ ಮಾಡಿರುವ ಆರೋಪಗಳನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತ ಬಿಜೆಪಿಯ ಬದ್ಧ ಟೀಕಾಕಾರರ ವಿರುದ್ಧವೂ ಸರ್ಕಾರ ಹರಿಹಾಯ್ದಿದೆ.
ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿ, ಆ್ಯಪಲ್ ಸಂಸ್ಥೆಯು ತನ್ನ ಎಚ್ಚರಿಕೆ ಸಂದೇಶಗಳನ್ನು 150 ದೇಶಗಳಲ್ಲಿ ನೀಡಿದೆ ಹಾಗೂ ಅವುಗಳಲ್ಲಿ ಕೆಲವು “ಸುಳ್ಳು ಎಚ್ಚರಿಕೆಗಳು” ಆಗಿರುವ ಸಾಧ್ಯತೆಯಿದೆಯೆಂದು ಆ್ಯಪಲ್ ಹೇಳಿದೆ ಎಂದರು.
ಈ ಎಚ್ಚರಿಕೆ ಸಂದೇಶಗಳ ಕುರಿತು ಸರ್ಕಾರ ವಿಸ್ತೃತ ತನಿಖೆಗೆ ಆದೇಶಿಸಿದೆ ಎಂದು ಹೇಳಿದ ಸಚಿವರು, ಈ ಸಂದೇಶಗಳನ್ನು ಪಡೆದವರು ಹಾಗೂ ಆ್ಯಪಲ್ ಸಂಸ್ಥೆಗೆ ಸರ್ಕಾರದೊಂದಿಗೆ ಸಹಕರಿಸುವಂತೆ ಆಗ್ರಹಿಸಿದ್ದಾರೆ.
Next Story





