ʼಆಪರೇಷನ್ ಸಿಂಧೂರʼ ಕಾರ್ಯಾಚರಣೆ ಕುರಿತ ಹೊಸ ವೀಡಿಯೊ ಬಿಡುಗಡೆ ಮಾಡಿದ ಭಾರತೀಯ ಸೇನೆ

Screengrab:X/@westerncomd_IA
ಹೊಸದಿಲ್ಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತ ಹೊಸ ವೀಡಿಯೊವನ್ನು ಭಾರತೀಯ ಸೇನೆ ರವಿವಾರ ಬಿಡುಗಡೆ ಮಾಡಿದೆ. ʼಯೋಜನೆ ರೂಪಿಸಿಲಾಯಿತು, ತರಬೇತಿ ನೀಡಲಾಯಿತು ಮತ್ತು ಕಾರ್ಯಗತಗೊಳಿಸಲಾಯಿತು, ನ್ಯಾಯ ದೊರಕಿತುʼ ಎಂದು ಭಾರತೀಯ ಸೇನೆಯ ಪಶ್ಚಿಮ ಕಮಾಂಡ್ ಎಕ್ಸ್ನಲ್ಲಿನ ಪೋಸ್ಟ್ನಲ್ಲಿ ತಿಳಿಸಿದೆ.
ಸೇನೆಯ ಪಶ್ಚಿಮ ಕಮಾಂಡ್ ಹಂಚಿಕೊಂಡ ವೀಡಿಯೊದಲ್ಲಿ, ಆಪರೇಷನ್ ಸಿಂಧೂರ್ ಕಾರ್ಯಾಚರಣೆ, ಪಾಕಿಸ್ತಾನ ದಶಕಗಳಿಂದ ಕಲಿಯದ ಒಂದು ಪಾಠವಾಗಿದೆ ಎಂದು ಭದ್ರತಾ ಸಿಬ್ಬಂದಿಯೋರ್ವರು ಹೇಳುವುದು ಕಂಡು ಬಂದಿದೆ.
ʼಇದೆಲ್ಲವೂ ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಪ್ರಾರಂಭವಾಯಿತು. ಕೋಪ ಕರಗಿದ ಲಾವಾದಂತಿತ್ತು. ಮನಸ್ಸಿನಲ್ಲಿ ಒಂದೇ ಒಂದು ಆಲೋಚನೆ ಇತ್ತು. ಈ ಬಾರಿ ಅವರ ಪೀಳಿಗೆ ನೆನಪಿಟ್ಟುಕೊಳ್ಳುವಂತಹ ರೀತಿಯಲ್ಲಿ ಪಾಠವನ್ನು ನಾವು ಕಲಿಸುತ್ತೇವೆ ಎಂಬುದಾಗಿತ್ತು. ಅದು ಸೇಡಿನ ಕ್ರಿಯೆಯಾಗಿರಲಿಲ್ಲ, ಅದು ನ್ಯಾಯವಾಗಿತ್ತು. ಮೇ 9ರ ರಾತ್ರಿ 9 ಗಂಟೆಗೆ ಕದನ ವಿರಾಮವನ್ನು ಉಲ್ಲಂಘಿಸಿದ ಶತ್ರುಗಳ ನೆಲೆಗಳನ್ನು ಭಾರತೀಯ ಸೇನೆ ನಾಶಪಡಿಸಿತು. ಆಪರೇಷನ್ ಸಿಂಧೂರ್ ಕೇವಲ ಒಂದು ಕ್ರಮವಲ್ಲ, ಅದು ದಶಕಗಳಿಂದ ಕಲಿಯದ ಪಾಕಿಸ್ತಾನಕ್ಕೆ ಪಾಠವಾಗಿತ್ತುʼ ಎಂದು ಭದ್ರತಾ ಸಿಬ್ಬಂದಿ ವೀಡಿಯೊದಲ್ಲಿ ಹೇಳಿದ್ದಾರೆ.
#StrongAndCapable#OpSindoor
— Western Command - Indian Army (@westerncomd_IA) May 18, 2025
Planned, trained & executed.
Justice served.@adgpi@prodefencechan1 pic.twitter.com/Hx42p0nnon







