ಅರ್ನಬ್ ಗೆ ನ್ಯಾಯ ; ಸಿದ್ದೀಕ್ ಗೆ ಅನ್ಯಾಯ!
ಅರ್ನಬ್ ಗೆ ವಾರದೊಳಗೆ ಸಿಗುವ ಜಾಮೀನು ಸಿದ್ದೀಕ್ ಗೆ ಎರಡು ವರ್ಷ ಸಿಗಲಿಲ್ಲ ಯಾಕೆ ?

ಅರ್ನಬ್ ಗೋಸ್ವಾಮಿ, ಸಿದ್ದೀಕ್ ಕಪ್ಪನ್
ಅರ್ನಬ್ ಗೋಸ್ವಾಮಿಗೆ ವಾರದೊಳಗೆ ಸಿಗುವ ನ್ಯಾಯ ಇನ್ನೊಬ್ಬ ಪತ್ರಕರ್ತ ಸಿದ್ದೀಕ್ ಕಪ್ಪನ್ ಗೆ ವರ್ಷಗಟ್ಟಲೆ ಯಾಕೆ ಸಿಗೋದಿಲ್ಲ? ರಜೆ ದಿನವೂ ವಿಚಾರಣೆ ಮಾಡಿ ಅರ್ನಬ್ ಗೋಸ್ವಾಮಿಗೆ ಜಾಮೀನು ನೀಡುವ ಸುಪ್ರೀಂ ಕೋರ್ಟು ಸಿದ್ದಿಕ್ ಕಪ್ಪನ್ ವಿಚಾರದಲ್ಲಿ ಮಾತ್ರ ಯಾಕೆ ತೀರಾ ವಿಭಿನ್ನವಾಗಿ ವರ್ತಿಸುತ್ತದೆ? ಸಿದ್ದೀಕ್ ಕಪ್ಪನ್ ಅವರ ಹೆಸರು ಹಾಗು ಧಾರ್ಮಿಕ ಗುರುತೇ ಅವರ ಪಾಲಿಗೆ ಸಮಸ್ಯೆಯಾಯಿತೇ? ಪ್ರೊ. ಸಾಯಿಬಾಬಾ ಅವರ ಖುಲಾಸೆಯನ್ನು ರದ್ದು ಮಾಡಲು ಸುಪ್ರೀಂ ಕೋರ್ಟ್ ರಜಾದಿನವೂ ಯಾಕೆ ವಿಚಾರಣೆ ನಡೆಸುತ್ತದೆ? 80 ವರ್ಷ ದಾಟಿದ ವೃದ್ಧ ಸ್ಟಾನ್ ಸ್ವಾಮಿ ಯಾಕೆ ಜೈಲಲ್ಲೇ ಪ್ರಾಣ ಬಿಡುವಂತಹ ಹೀನಾಯ ಸ್ಥಿತಿ ಬರುತ್ತದೆ?
ಖ್ಯಾತ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿಯವರು ಕಲ್ಕತ್ತಾ ಡಿಬೇಟಿಂಗ್ ಸರ್ಕಲ್ ನಲ್ಲಿ ಮಾಡಿದ ಭಾಷಣವೊಂದು ಇದೀಗ ತುಂಬಾ ವೈರಲಾಗಿದೆ.
ನ್ಯಾಯವನ್ನು ತುಂಬಾ ಬಾರಿ ಕೇಳಲಾಗುತ್ತದೆ. ಆದರೆ ಬಹಳ ಕಡಿಮೆ ಅವಕಾಶಗಳಲ್ಲಿ ಮಾತ್ರ ನ್ಯಾಯ ಸಿಗುತ್ತದೆ ಎಂಬ ವಿಷಯವನ್ನು ಸಮರ್ಥಿಸಿಕೊಂಡು ರಾಜ್ ದೀಪ್ ಸರ್ದೇಸಾಯಿಯವರು ಮಾಡಿದ ಭಾಷಣ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ವೈಫಲ್ಯಗಳ ಕುರಿತು ಬೆಳಕು ಚೆಲ್ಲಿದೆ.
ಭಾಷಣದ ಆರಂಭದಲ್ಲಿ ನಮ್ಮ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆ ಮುರಿದು ಬಿದ್ದಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಹೇಳುವ ಅವರು ತಮ್ಮ 10 ನಿಮಿಷಗಳ ಭಾಷಣದಲ್ಲಿ ದೇಶದ ಈಗಿನ ನ್ಯಾಯ ವ್ಯವಸ್ಥೆಯನ್ನು ಕಟುವಾಗಿ ಟೀಕಿಸುತ್ತಾರೆ.
ದೇಶದಲ್ಲಿ ಬೇಕಾದಷ್ಟು ಆನ್ಲೈನ್ ಕ್ಯಾಂಪೇನ್ ಗಳು ಮತ್ತು ಕ್ಯಾಂಡಲ್ ಲೈಟ್ ಮಾರ್ಚ್ ನಡೆಯುತ್ತಿಲ್ಲ. ಅದರಿಂದ ಯಾರೂ ನ್ಯಾಯ ಕೇಳುತ್ತಿಲ್ಲ ಎಂದು ತನಗಿಂತ ಮೊದಲು ಹೇಳಿದ್ದ ತನ್ನ ಮಾಜಿ ಸಹೋದ್ಯೋಗಿ ಬರ್ಖಾ ದತ್ ರನ್ನೂ ರಾಜ್ ದೀಪ್ ತರಾಟೆಗೆ ತೆಗೆದುಕೊಂಡರು. ಹಾಗೆ ಹೇಳುವುದು ನಮ್ಮ ದೇಶದಲ್ಲಿ ನ್ಯಾಯಕ್ಕಾಗಿ ಬೇಡುತ್ತಿರುವ ಜನರಿಗೆ ಮಾಡುವ ಅವಮಾನ ಎಂದು ರಾಜ್ ದೀಪ್ ಹೇಳುತ್ತಾರೆ.
ಎರಡು ಪತ್ರಕರ್ತರ ಕಥೆಗಳನ್ನು ನಿಮ್ಮ ಮುಂದೆ ನಾನು ಹೇಳಲೇಬೇಕು. ಈ ದೇಶ ಹೇಗೆ ನಡೆಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆ ಕಥೆಯನ್ನು ನಾನು ಹೇಳುವುದು ಬಹಳ ಅಗತ್ಯ.
ನವಂಬರ್ 2020ರಲ್ಲಿ ಸುಪ್ರೀಂಕೋರ್ಟಿನ ರಜಾ ಕಾಲದ ಪೀಠವೊಂದು ಭಾರತದ ಅಂದಿನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದಲ್ಲಿ ಶನಿವಾರದಂದು ಕುಳಿತುಕೊಳ್ಳುತ್ತದೆ.
ಸುಮಾರು ಆರು ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದ ಪತ್ರಕರ್ತ, ನನ್ನ ಮಾಜಿ ಸಹೋದ್ಯೋಗಿ ಅರ್ನಬ್ ಗೋಸ್ವಾಮಿಯವರಿಗೆ ಈ ಪೀಠ ಜಾಮೀನು ನೀಡುತ್ತದೆ. ಶನಿವಾರ ದಿನ ರಜೆ ಸಮಯದಲ್ಲಿ ಕುಳಿತುಕೊಂಡು ಈ ಪೀಠ ಅರ್ನಬ್ ಗೋಸ್ವಾಮಿ ಅವರ ಸ್ವಾತಂತ್ರ್ಯವನ್ನು ಕಾಪಾಡುತ್ತದೆ. ಅವರ ಸಾಂವಿಧಾನಿಕ ಹಕ್ಕನ್ನು ಅವರಿಗೆ ನೀಡಲಾಗುತ್ತದೆ. ಈ ವೇಳೆ ಮಾಜಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ವ್ಯಕ್ತಿ ಸ್ವಾತಂತ್ರ್ಯದ ಕುರಿತಾಗಿ ಮಾತನಾಡುತ್ತಾರೆ. ಆವತ್ತು ಸುಪ್ರೀಂ ಕೋರ್ಟ್ ತನ್ನ ಕೆಲಸವನ್ನು ಚೆನ್ನಾಗಿ ಮಾಡಿತೆಂದೇ ನಾನು ಹೇಳುತ್ತೇನೆ.
ಆದರೆ ಇನ್ನೊಂದು ಪ್ರಕರಣದ ಕುರಿತು ನೀವು ಗಮನ ಹರಿಸಿ. ಉತ್ತರ ಪ್ರದೇಶದ ಹತ್ರಸ್ ನಲ್ಲಿ ನಡೆದಂತಹ ಹತ್ತೊಂಬತ್ತು ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗು ಸಾವಿನ ಕುರಿತು ವರದಿ ಮಾಡಲು ಹೋದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ಗೋಸ್ವಾಮಿಯವರಿಗೆ ಜಾಮೀನು ನೀಡುವುದಕ್ಕಿಂತ ಕೇವಲ ಒಂದು ತಿಂಗಳು ಮುಂಚೆ ಅಂದ್ರೆ ಅಕ್ಟೋಬರ್ 2020ರಲ್ಲಿ ಬಂಧಿಸಲಾಗುತ್ತದೆ. ಅವರ ಮೇಲೆ ಯುಎಪಿಎ ಹಾಗು ಪಿಎಂಎಲ್ ಎ ಕೇಸ್ ಗಳು ದಾಖಲಾಗುತ್ತವೆ. ಆದರೆ ಅವರಿಗೆ ಯುಎಪಿಯ ಯಲ್ಲಿ ಜಾಮೀನು ಸಿಗೋದು ಸಪ್ಟೆಂಬರ್ 2022 ರಲ್ಲಿ ಮತ್ತು ಅವರು ಕೊನೆಗೂ ಹೊರಬರುವುದು ಫೆಬ್ರವರಿ 2023ರಲ್ಲಿ. ಸುಮಾರು ಎರಡುವರೆ ವರ್ಷಗಳ ಕಾಲ ಅವರು ಜೈಲಿನಲ್ಲಿ ಕಳೆಯುತ್ತಾರೆ.
ಒಬ್ಬರು ಪ್ರೈಮ್ ಟೈಮ್ ಆಂಕರ್ ಗೆ ಸಿಕ್ಕಿದ ನ್ಯಾಯ ಇನ್ನೊಬ್ಬರು ಅಷ್ಟೊಂದು ಖ್ಯಾತಿ ಇಲ್ಲದ ಪತ್ರಕರ್ತನಿಗೆ ಸಿಗಲಿಲ್ಲ. ಅವರಿಗೆ ಅನ್ಯಾಯವಾಯಿತು ಎಂದು ರಾಜ್ ದೀಪ್ ಒತ್ತಿ ಹೇಳುತ್ತಾರೆ. ಆ ಪತ್ರಕರ್ತನ ಹೆಸರಿನ ಹಾಗು ಧಾರ್ಮಿಕ ಗುರುತಿನ ಕಾರಣದಿಂದಲೂ ಆತನಿಗೆ ನ್ಯಾಯ ಸಿಗಲಿಲ್ಲವೇ ಎಂದು ರಾಜ್ ದೀಪ್ ಪ್ರಶ್ನಿಸಿದ್ದಾರೆ.
ಸ್ವಾತಂತ್ರ್ಯದ ಬಗ್ಗೆ ದೊಡ್ಡ ಮಾತನಾಡುವ ನ್ಯಾಯಾಧೀಶರು ಎರಡು ನೀತಿಗಳನ್ನು ಯಾಕೆ ಪಾಲಿಸುತ್ತಾರೆ ಎಂದು ರಾಜ್ ದೀಪ್ ಪ್ರಶ್ನಿಸುತ್ತಾರೆ. ಕಾಶ್ಮೀರಿ ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ 2 ವರ್ಷಗಳ ಕಾಲ ವಿಚಾರಣೆ ಇಲ್ಲದೇ ಜೈಲಿನಲ್ಲಿ ಇಡಬಹುದು. ಇವರ ಕುಟುಂಬಗಳು ನ್ಯಾಯ ಕೇಳಲ್ಲ ಎಂದು ನೀವು ಹೇಳುತ್ತೀರಾ... ಅವರಿಗೆ ನ್ಯಾಯವನ್ನು ತಲುಪಿಸಲಾಗಿಲ್ಲ ಎಂದು ರಾಜ್ ದೀಪ್ ಹೇಳುತ್ತಾರೆ.
ಫಾದರ್ ಸ್ಟಾನ್ ಸ್ವಾಮಿ ಯವರು ಕೇವಲ ಬುಡಕಟ್ಟು ಹಕ್ಕುಗಳ ಕುರಿತು ಧ್ವನಿ ಎತ್ತಿದ್ದರು. ಅವರಿಗೆ ನೀರು ಕುಡಿಯಲು ಸ್ಟ್ರಾ ಸಿಪ್ಪರ್ ನೀಡದೆ ಇದ್ದದ್ದು ಯಾವ ನ್ಯಾಯ? 82 ವರ್ಷದ ವೃದ್ಧನನ್ನು ಯಾಕೆ ಬಂಧನದಲ್ಲಿ ಇಡಲಾಗಿತ್ತು?
ಅದೇ ವೇಳೆ ಸಬ್ರತೊ ರಾಯ್ ಸಹಾರಾ ಅವರಿಗೆ ತಿಹಾರ್ ಜೈಲಿನಲ್ಲಿ ಎಲ್ಲಾ ಸೌಲಭ್ಯ ಸಿಕ್ಕಿತ್ತು ಎಂದು ರಾಜ್ ದೀಪ್ ನೆನಪಿಸಿದರು. ಕಾನೂನು ನೆರವು ಇಲ್ಲ. ಉಚಿತ ಸೇವೆ ನೀಡುವ ವಕೀಲರ ಕೊರತೆ ಇದೆ. ನಾವೆಲ್ಲರೂ ನ್ಯಾಯವನ್ನು ಕೋರುತ್ತೇವೆ, ಆದರೆ ನ್ಯಾಯವನ್ನು ತೀರಾ ವಿರಳವಾಗಿ ನೀಡಲಾಗುತ್ತದೆ ಎಂದು ರಾಜ್ ದೀಪ್ ಅತ್ಯಂತ ಪ್ರಬಲವಾಗಿ ವಾದಿಸಿದ್ದಾರೆ. ಎಲ್ಲಿಯಾದರೂ ನ್ಯಾಯವನ್ನು ನಿರಾಕರಿಸಲಾಗಿದ್ದರೆ ಎಲ್ಲೆಡೆ ನ್ಯಾಯಕ್ಕೆ ಅದರಿಂದ ಬೆದರಿಕೆಯಿದೆ ಎಂಬ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಮಾತನ್ನೂ ರಾಜ್ ದೀಪ್ ನೆನಪಿಸಿಕೊಳ್ಳು…







