ಅಸ್ಸಾಂ | ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ, ನಾಲ್ಕು ಬಾರಿ ಸಂಸದ ರಾಜೇನ್ ಗೋಹೈನ್ ಬಿಜೆಪಿಗೆ ರಾಜೀನಾಮೆ

ರಾಜೇನ್ ಗೋಹೈನ್ (Photo:X/@rajengohainbjp)
ಗುವಾಹಟಿ : ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ರಾಜೇನ್ ಗೋಹೈನ್ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯನ್ನು ಬಿಜೆಪಿಗೆ ಅಸ್ಸಾಂನಲ್ಲಿ ದೊಡ್ಡ ಹಿನ್ನೆಡೆ ಎಂದು ಹೇಳಲಾಗಿದೆ.
ಅಸ್ಸಾಂ ಬಿಜೆಪಿಯ ಮಾಜಿ ಅಧ್ಯಕ್ಷ ಹಾಗೂ ನಾಗಾಂವ್ ಕ್ಷೇತ್ರದ ನಾಲ್ಕು ಬಾರಿ ಸಂಸದರಾಗಿರುವ ಗೋಹೈನ್ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಮೂರು ದಶಕಗಳಿಗೂ ಹೆಚ್ಚು ಕಾಲ ಬಿಜೆಪಿಯಲ್ಲಿದ್ದ ಗೋಹೈನ್ ಅವರು ಅಸ್ಸಾಂ ಬಿಜೆಪಿಯಲ್ಲಿ ಪ್ರಬಲ ನಾಯಕನಾಗಿದ್ದರು. ಅವರು 1999 ರಿಂದ 2019ರವರೆಗೆ ನಾಲ್ಕು ಅವಧಿಗೆ ನಾಗಾಂವ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2016 ರಿಂದ 2019 ರವರೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
Next Story





