“ಅಟಲ್ ಸೇತು ಪಿಕ್ನಿಕ್ ಸ್ಥಳವಲ್ಲ; ಸೆಲ್ಫೀ, ಫೋಟೋ ಕ್ಲಿಕ್ಕಿಸಲು ವಾಹನ ನಿಲ್ಲಿಸಿದರೆ ಎಫ್ಐಆರ್”: ಮುಂಬೈ ಪೊಲೀಸರ ಎಚ್ಚರಿಕೆ
Photo:X/@divya_gandotra
ಹೊಸದಿಲ್ಲಿ : ದೇಶದ ಅತ್ಯಂತ ದೊಡ್ಡ ಸಮುದ್ರ ಸೇತುವೆ ಆಗಿರುವ ಅಟಲ್ ಸೇತು ಅಥವಾ ಮುಂಬೈ ಟ್ರಾನ್ಸ್ ಹಾರ್ಬರ್ ಸೀಲಿಂಕ್ ಅನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬೆನ್ನಲ್ಲೇ ಈ ಸೇತುವೆ ಮೂಲಕ ಹಾದು ಹೋಗುವ ವಾಹನ ಸವಾರರು ದಾರಿ ಮಧ್ಯೆ ತಮ್ಮ ವಾಹನಗಳನ್ನು ನಿಲ್ಲಿಸಿ ಸೆಲ್ಫೀ ಮತ್ತು ಫೋಟೋಗಳನ್ನು ಕ್ಲಿಕ್ಕಿಸುವುದು, ರೈಲಿಂಗ್ ಮೇಲೆ ಹತ್ತುವುದು ಹಾಗೂ ರಸ್ತೆ ಬದಿಯಲ್ಲಿ ನಿಯಮ ಉಲ್ಲಂಘಿಸಿ ತ್ಯಾಜ್ಯ ಎಸೆಯುತ್ತಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು “ಅಟಲ್ ಸೇತು ಎಂಬುದು 21.8 ಕಿಮೀ ಉದ್ದದ ಪಿಕ್ನಿಕ್ ಸ್ಥಳವಲ್ಲ” ಎಂದು ಸಾಮಾಜಿಕ ಜಾಲತಾಣ ಪೋಸ್ಟ್ ಒಂದರಲ್ಲಿ ಹೇಳಿದ್ದಾರೆ.
“ಅಟಲ್ ಸೇತು ಖಂಡಿತಾ ಒಂದು ನೋಡಬೇಕಾದ ಸ್ಥಳ. ಆದರೆ ಸೇತುವೆ ಮಧ್ಯ ವಾಹನ ನಿಲ್ಲಿಸಿ ಫೋಟೋ ಕ್ಲಿಕ್ಕಿಸುವುದು ಕಾನೂನುಬಾಹಿರ. ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ನಲ್ಲಿ ನಿಮ್ಮ ವಾಹನ ನಿಲ್ಲಿಸಿದರೆ ಎಫ್ಐಆರ್ ಎದುರಿಸಬೇಕಾದೀತು,” ಎಂದು ತಮ್ಮ ಪೋಸ್ಟ್ನಲ್ಲಿ ಮುಂಬೈ ಪೊಲೀಸರು ಹೇಳಿದ್ದಾರೆ.
We agree that Atal Setu is definitely 'worth a watch' but it's also illegal to stop on it & click photos. You will face a FIR if you stop on MTHL. #MumbaiTransHarbourLink #MTHL #AtalSetu#FaceFIRIfYouStop pic.twitter.com/582CLgA72W
— Mumbai Traffic Police (@MTPHereToHelp) January 15, 2024