ಬಿಹಾರ ವಿಧಾನಸಭಾ ಚುನಾವಣೆ| ಮತದಾನ ವಿಳಂಬಕ್ಕೆ ವಿದ್ಯುತ್ ಕಡಿತ: ಆರ್ಜೆಡಿ ಆರೋಪ

Photo credit: PTI
ಪಾಟ್ನಾ: ಮಹಾಘಟಬಂಧನ್ ಪ್ರಾಬಲ್ಯ ಹೊಂದಿರುವ ಪ್ರದೇಶಗಳಲ್ಲಿ ಮತದಾನ ಪ್ರಕ್ರಿಯೆಯನ್ನು ನಿಧಾನಗೊಳಿಸಲು ಉದ್ದೇಶಪೂರ್ವಕವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ ಎಂದು ಆರ್ ಜೆ ಡಿ ಆರೋಪಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿರುವ ಸಂದರ್ಭದಲ್ಲಿ ಆರ್ಜೆಡಿ (ರಾಷ್ಟ್ರೀಯ ಜನತಾ ದಳ) ಈ ಆರೋಪವನ್ನು ಹೊರಿಸಿದೆ.
ಈ ಕುರಿತು X ನಲ್ಲಿ ಆರ್ಜೆಡಿ ಪೋಸ್ಟ್ ಮಾಡಿದ್ದು, “ಮತದಾನ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಉದ್ದೇಶದಿಂದ ಕೆಲವು ಪ್ರಬಲ ಮತಗಟ್ಟೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಚುನಾವಣಾ ಆಯೋಗವು ಈ ದುರುದ್ದೇಶಪೂರಿತ ಕ್ರಮಗಳನ್ನು ತಕ್ಷಣ ಗಮನಿಸಿ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದೆ.
ಆದರೆ, ಭಾರತದ ಚುನಾವಣಾ ಆಯೋಗವು ಈ ಆರೋಪವನ್ನು ತಿರಸ್ಕರಿಸಿದೆ.
X ನಲ್ಲಿ ಪ್ರತಿಕ್ರಿಯೆ ನೀಡಿದ ಆಯೋಗವು, “ಆರ್ಜೆಡಿಯ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ದಾರಿತಪ್ಪಿಸುವಂತಿವೆ. ಬಿಹಾರದ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಸರಾಗವಾಗಿ, ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ನಡೆಯುತ್ತಿದೆ. ಮತದಾರರಿಗೆ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ” ಎಂದು ಸ್ಪಷ್ಟಪಡಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 121 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಬೆಳಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಚಲಾಯಿಸುತ್ತಿದ್ದಾರೆ.
प्रथम चरण की वोटिंग के मध्य में महागठबंधन के मजबूत बूथों पर धीमा मतदान करने के उद्देश्य से बीच-बीच में बिजली काट दी जा रही है। जानबूझ कर स्लो वोटिंग कराई जा रही है।
— Rashtriya Janata Dal (@RJDforIndia) November 6, 2025
कृपया चुनाव आयोग ऐसी धांधली बुरी नीयत" और"दुर्भावनापूर्ण इरादों" का अविलंब @ECISVEEP @CEOBihar संज्ञान लेकर…







