ಪಂಜಾಬ್ | ಸಿಕ್ಸರ್ ಸಿಡಿಸಿದ ತಕ್ಷಣ ಹೃದಯಾಘಾತ : ಕ್ರಿಕೆಟ್ ಮೈದಾನದಲ್ಲೇ ಬ್ಯಾಟ್ಸ್ಮನ್ ನಿಧನ

Photo | instagram
ಫಿರೋಝ್ಪುರ : ಪಂಜಾಬ್ನ ಫಿರೋಝ್ಪುರದಲ್ಲಿ ಸಿಕ್ಸರ್ ಸಿಡಿಸಿದ ತಕ್ಷಣ ಹೃದಯಾಘಾತದಿಂದ ಬ್ಯಾಟ್ಸ್ಮನ್ ಓರ್ವರು ಕ್ರಿಕೆಟ್ ಮೈದಾನದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹೃದಯಾಘಾತದಿಂದ ಮೃತಪಟ್ಟ ಬ್ಯಾಟ್ಸ್ಮನ್ಗೆ ಫಿರೋಝ್ಪುರದ ಹರ್ಜೀತ್ ಸಿಂಗ್ ಎಂದು ಗುರುತಿಸಲಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬ್ಯಾಟ್ಸ್ಮನ್ ಸಿಕ್ಸರ್ ಸಿಡಿಸಿದ ತಕ್ಷಣ ಅಸ್ವಸ್ಥರಾಗಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ತಕ್ಷಣ, ಇತರ ಆಟಗಾರರು ಅವರಿಗೆ ಸಿಪಿಆರ್ ನೀಡಲು ಯತ್ನಿಸಿದರು. ಆದರೆ ಅವರು ಚೇತರಿಸಿಕೊಳ್ಳಲಿಲ್ಲ ಎಂದು ತಿಳಿದು ಬಂದಿದೆ.
2024ರಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಪುಣೆಯ ಗರ್ವಾರೆ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ಆಡುತ್ತಿದ್ದಾಗ ಇಮ್ರಾನ್ ಪಟೇಲ್(35) ಎಂಬ ಕ್ರಿಕೆಟ್ ಆಟಗಾರ ಹೃದಯಾಘಾತದಿಂದ ಮೃತಪಟ್ಟಿದ್ದರು.
Next Story







