ಅಲಿಘರ್| ವಿವಾಹ ಕಾರ್ಯಕ್ರಮದಲ್ಲಿ ಗೋಮಾಂಸ ಬಡಿಸಿದ್ದಾರೆಂದು ಆರೋಪಿಸಿ ಗದ್ದಲ : ಮೂವರು ಪೊಲೀಸ್ ವಶಕ್ಕೆ

ಸಾಂದರ್ಭಿಕ ಚಿತ್ರ | Photo Credit : freepik
ಅಲಿಘರ್: ವಿವಾಹ ಕಾರ್ಯಕ್ರಮದ ಆರತಕ್ಷತೆಯಲ್ಲಿ ಗೋಮಾಂಸ ಬಡಿಸಲಾಗಿದೆ ಎಂದು ಆರೋಪಿಸಿ ಗದ್ದಲವನ್ನು ಸೃಷ್ಟಿಸಿರುವ ಘಟನೆ ಅಲಿಗಢದ ಸಿವಿಲ್ ಲೈನ್ನಲ್ಲಿ ನಡೆದಿದೆ.
ಮದುವೆ ಕಾರ್ಯಕ್ರಮದಲ್ಲಿ ಊಟದ ಕೌಂಟರ್ನಲ್ಲಿ ‘ಬೀಫ್ ಕರಿ’ ಎಂದು ಬರೆದಿರುವುದಕ್ಕೆ ಮದುವೆಗೆ ಬಂದಿದ್ದ ಇಬ್ಬರು ಅತಿಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಗೋಮಾಂಸ ನಿಷೇಧವಿದೆ. ಆದರೆ, ಎಮ್ಮೆ ಮಾಂಸಕ್ಕೆ ಯಾವುದೇ ನಿಷೇಧವಿಲ್ಲ. ಮದುವೆ ಮನೆಯಲ್ಲಿನ ಅಡುಗೆಯಲ್ಲಿ ಬಳಸಿರುವ ‘ಬೀಫ್ ಕರಿ’ ಯಾವುದು ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಹಾರ ಮತ್ತು ಔಷಧ ಆಡಳಿತ(ಎಫ್ಡಿಎ) ಅಧಿಕಾರಿಗಳು ತೆರಳಿ ಮಾದರಿಯನ್ನು ಸಂಗ್ರಹಿಸಿ ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಿದ್ದಾರೆ.
ಗಲಾಟೆಯಲ್ಲಿ ಭಾಗಿಯಾಗಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ವೃತ್ತ ಅಧಿಕಾರಿ ಸರ್ವಂ ಸಿಂಗ್ ತಿಳಿಸಿದ್ದಾರೆ.
Next Story





