ಭೆಂಡಿ ಬಝಾರ್ ಗುಂಪು ಘರ್ಷಣೆ ; 50ಕ್ಕೂ ಅಧಿಕ ಮಂದಿ ವಿರುದ್ಧ ಕೇಸ್

Photocredit : timesofindia.indiatimes.com
ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಭೆಂಡಿ ಬಝಾರ್ ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿ 50ಕ್ಕೂ ಅಧಿಕ ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೌಲಾನಾ ಆಝಾದ್ ರಸ್ತೆಯಲ್ಲಿರುವ ಗೋಲ್ ದೇವಲ್ ದೇಗುಲದ ಜಂಕ್ಷನ್ ನಲ್ಲಿ ನಡೆದ ಮೆರವಣಿಗೆ ಸಂದರ್ಭ ಘರ್ಷಣೆ ಸಂಭವಿಸಿತ್ತು.ಮೆರವಣಿಗೆಯಲ್ಲಿ ಕೆಲವರು ಜನರೇಟರಿನ ವ್ಯಾನಿಗೆ ಟ್ರಕ್ ಜೋಡಿಸಿ, ಸ್ಪೀಕರ್ ಗಳಲ್ಲಿ ಗಟ್ಟಿ ಧ್ವನಿಯಲ್ಲಿ ಸಂಗೀತ ನುಡಿಸಿದ್ದರು, ಜೋರಾಗಿ ಘೋಷಣೆಗಳನ್ನು ಕೂಡಾ ಕೂಗಿದ್ದರು. ಮೆರವಣಿಗೆಯಲ್ಲಿದ್ದವರಲ್ಲಿ ಒಬ್ಬಾತ ಕಲ್ಲು ತೂರಾಟ ಕೂಡಾ ನಡೆಸಿದ್ದನೆನ್ನಲಾಗಿದೆ. ಇದರ ಬೆನ್ನಲ್ಲೇ ಘರ್ಷಣೆ ಭುಗಿಲೆದ್ದಿತೆಂದು ಪೊಲೀಸರು ತಿಳಿಸಿದ್ದಾರೆ.
ಪರಿಸ್ಥಿತಿ ಈಗ ಸಹಜತೆಗೆ ಮರಳಿದ್ದು, ಸ್ಥಳದಲ್ಲಿ ಭಾರೀ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಗಲಭೆಗೆ ಸಂಬಂಧಿಸಿ ಆರೋಪಿಗಳ ವಿರುದ್ಧ ಕಾನೂನುಬಾಹಿರ ಗುಂಪುಗೂಡುವಿಕೆ, ಗಲಭೆ, ಕಿಡಿಗೇಡಿತನಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಶಬ್ಧ ಮಾಲಿನ್ಯಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.





