ಬಿಹಾರ | ಭದ್ರತಾ ವ್ಯವಸ್ಥೆ ಉಲ್ಲಂಘಿಸಿ ರಾಹುಲ್ ಗಾಂಧಿಗೆ ಮುತ್ತಿಕ್ಕಿದ ಯುವಕ

ರಾಹುಲ್ ಗಾಂಧಿ | PC : PTI
ಪಾಟ್ನಾ: ಮತದಾರರ ಅಧಿಕಾರ ಯಾತ್ರೆ ವೇಳೆ ಪೂರ್ನಿಯಾ-ಅರಾರಿಯಾ ಮಾರ್ಗದಲ್ಲಿ ರಾಹುಲ್ ಗಾಂಧಿಗೆ ಯುವಕನೋರ್ವ ಭದ್ರತಾ ವ್ಯವಸ್ಥೆಯನ್ನು ಉಲ್ಲಂಘಿಸಿ ಮುತ್ತಿಕ್ಕಿದ್ದ ಘಟನೆ ನಡೆದಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಯುವಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ.
ಮತದಾರರ ಅಧಿಕಾರ ಯಾತ್ರೆಯ ಭಾಗವಾಗಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಬೈಕ್ ಅನ್ನು ಚಲಾಯಿಸುವಾಗ, ಭದ್ರತಾ ವ್ಯವಸ್ಥೆಯ ಸರ್ಪಗಾವಲನ್ನು ಉಲ್ಲಂಘಿಸಿದ ವ್ಯಕ್ತಿಯೊಬ್ಬ ರಾಹುಲ್ ಗಾಂಧಿಯನ್ನು ತಬ್ಬಿಕೊಂಡು ಅವರ ತೋಳಿಗೆ ಮುತ್ತಿಕ್ಕಿದ್ದಾನೆ. ತಕ್ಷಣವೇ ರಾಹುಲ್ ಗಾಂಧಿಯವರ ಭದ್ರತಾ ಸಿಬ್ಬಂದಿಯು ಆತನನ್ನು ದೂರಕ್ಕೆ ತಳ್ಳಿ, ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ಕುರಿತ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿಗಳು ಆತನನ್ನು ಭದ್ರತಾ ವಲಯದಿಂದ ಹೊರಕ್ಕೆ ತಳ್ಳಿದ್ದಾರೆ.
A youth from Bihar tried to hug Rahul Gandhi and kissed his shoulder with affection…!
— زماں (@Delhiite_) August 24, 2025
- Earlier it went viral that he kissed Rahul Gandhi, but actually it was just a wrong camera angle. pic.twitter.com/ij2jTy267p
ಆಗಸ್ಟ್ 17ರಂದು ಚಾಲನೆ ನೀಡಲಾದ 16 ದಿನಗಳ 13,000 ಕಿಮೀ ಮತದಾರರ ಅಧಿಕಾರ ಯಾತ್ರೆ ಇಂದು ಪೂರ್ನಿಯಾ ಜಿಲ್ಲೆ ಪ್ರವೇಶಿಸಿತು. ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಯಾತ್ರೆ 20 ಜಿಲ್ಲೆಗಳಲ್ಲಿ ಹಾದು ಹೋಗಲಿದ್ದು, ಸೆಪ್ಟೆಂಬರ್ 1ರಂದು ಸಮಾರೋಪಗೊಳ್ಳಲಿದೆ.







