ಬಿಹಾರ ವಿಧಾನ ಸಭಾ ಚುನಾವಣೆ | ಎರಡನೇ ಹಂತದಲ್ಲಿ ಶೇ. 67.14 ಮತದಾನ

ಪಾಟ್ನಾ, ನ. 11: ಬಿಹಾರದಲ್ಲಿ ನಡೆದ ವಿಧಾನ ಸಭೆ ಚುನಾವಣೆಯ ಎರಡನೇ ಹಂತದಲ್ಲಿ ಸಂಜೆ 5 ಗಂಟೆ ವರೆಗೆ ಶೇ. 67.14 ಮತದಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆದಿದೆ. ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡರು.
ಎರಡನೇ ಹಾಗೂ ಅಂತಿಮ ಹಂತದಲ್ಲಿ 122 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಅಂತಿಮ ಹಂತದ ಮತದಾನ ಮಗಧ, ಮಿಥಿಲಾಚಲ್, ಸೀಮಾಚಲ್, ಶಹಾಬಾದ್ ಹಾಗೂ ತಿರ‌್ಹತ್ ವಲಯಗಳಲ್ಲಿರುವ ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಿತ್ತು.
ಮೊದಲ ಹಂತದಲ್ಲಿ 121 ವಿಧಾನ ಸಭಾ ಕ್ಷೇತ್ರಗಳಿಗೆ ನವೆಂಬರ್ 6ರಂದು ಮತದಾನ ನಡೆದಿತ್ತು. ಇದರೊಂದಿಗೆ 243 ವಿಧಾನ ಸಭಾ ಕ್ಷೇತ್ರಗಳಿಗೆ ಎರಡು ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ.
ನ. 14ರಂದು ಮತ ಎಣಿಕೆ ನಡೆಯಲಿದೆ.
Next Story





