ಬಿಹಾರ | ಶಾಸಕ ತೇಜ್ ಪ್ರತಾಪ್ ಯಾದವ್ ಸೂಚನೆಯಂತೆ ʼಡ್ಯಾನ್ಸ್ʼ ಮಾಡಿದ ಕಾನ್ಸ್ಟೇಬಲ್ ಅಮಾನತು
ಡ್ಯಾನ್ಸ್ ಮಾಡಿ ಇಲ್ಲಾಂದ್ರೆ ಅಮಾನತು ಮಾಡುತ್ತೇನೆ ಎಂದು ಬೆದರಿಸಿದ್ದ ಶಾಸಕ!

Screengrab: X/@PTI_News
ಪಾಟ್ನಾ : ಬಿಹಾರದಲ್ಲಿ ಹೋಳಿ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ, ಆರ್ಜೆಡಿ ಶಾಸಕ ತೇಜ್ ಪ್ರತಾಪ್ ಯಾದವ್ ತನ್ನ ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಕಾನ್ಸ್ಟೇಬಲ್ಗೆ ಡ್ಯಾನ್ಸ್ ಮಾಡುವಂತೆ ಸೂಚಿಸಿದರು. ಡ್ಯಾನ್ಸ್ ಮಾಡಲು ಅಧಿಕಾರಿ ಹಿಂದೇಟು ಹಾಕಿದ್ದರು. ಈ ವೇಳೆ ತೇಜ್ ಪ್ರತಾಪ್ ಅಮಾನತು ಬೆದರಿಕೆ ಹಾಕಿದ್ದರು. ಆ ಬಳಿಕ ಪೊಲೀಸ್ ಸಿಬ್ಬಂದಿ ಡ್ಯಾನ್ಸ್ ಮಾಡುವುದು ಕಂಡು ಬಂದಿದೆ. ಇದೀಗ ಸಾರ್ವಜನಿಕ ಸ್ಥಳದಲ್ಲಿ ಡ್ಯಾನ್ಸ್ ಮಾಡಿದ ಶಾಸಕರ ವೈಯಕ್ತಿಕ ಭದ್ರತಾ ಕರ್ತವ್ಯದಲ್ಲಿದ್ದ ಕಾನ್ಸ್ಟೇಬಲ್ ದೀಪಕ್ ಕುಮಾರ್ ಅವರನ್ನು ಅಮಾನತುಗೊಳಿಸಿ ಮತ್ತೋರ್ವರನ್ನು ನೇಮಿಸಲಾಗಿದೆ ಎಂದು ವರದಿಯಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಡ್ಯಾನ್ಸ್ ಮಾಡುವಂತೆ ಶಾಸಕ ತೇಜ್ ಪ್ರತಾಪ್ ಯಾದವ್ ನೀಡಿದ ಸೂಚನೆಯನ್ನು ಪಾಲಿಸಿದ ಕಾನ್ಸ್ಟೇಬಲ್ ದೀಪಕ್ ಕುಮಾರ್ ಅವರನ್ನು ಅಮಾನತುಗೊಳಿಸಿ ದೀಪಕ್ ಕುಮಾರ್ ಬದಲಿಗೆ ಮತ್ತೋರ್ವ ಕಾನ್ಸ್ಟೆಬಲ್ ಅನ್ನು ನಿಯೋಜಿಸಲಾಗಿದೆ ಎಂದು ಪಾಟ್ನಾದ ಪೊಲೀಸ್ ಅಧೀಕ್ಷಕರ ಕಚೇರಿಯು ತಿಳಿಸಿದೆ.
ಕಾನ್ಸ್ಟೇಬಲ್ ದೀಪಕ್ ಕುಮಾರ್ ಶಾಸಕರ ಆದೇಶವನ್ನು ಪಾಲಿಸಿದ್ದಕ್ಕಾಗಿ ಶಿಸ್ತು ಕ್ರಮವನ್ನು ಎದುರಿಸಿದರು ಎಂದು ಹೇಳಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ವೇದಿಕೆ ಮೇಲೆ ಕುಳಿತುಕೊಂಡಿರುವ ಶಾಸಕ ತೇಜ್ ಪ್ರತಾಪ್ ಯಾದವ್ ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ ನಾನು ಈಗ ಒಂದು ಹಾಡನ್ನು ಹಾಕಿಸುತ್ತೇನೆ. ನೀವು ಅದಕ್ಕೆ ಡ್ಯಾನ್ಸ್ ಮಾಡಬೇಕು. ಇಲ್ಲವಾದರೆ ನಿಮ್ಮನ್ನು ಅಮಾನತು ಮಾಡಿಸುತ್ತೇನೆ ಎಂದು ಹೇಳಿದರು. ಇದಾದ ಬಳಿಕ ಹಾಡಿಗೆ ಪೊಲೀಸ್ ಕಾನ್ಸ್ಟೆಬಲ್ ಡ್ಯಾನ್ಸ್ ಮಾಡುವುದು ಕಂಡು ಬಂದಿದೆ.
VIDEO | A policeman was seen dancing on the instruction of RJD leader Tej Pratap Yadav during Holi celebration at his residence in Patna. #tejpratapyadav #Holi #Patna pic.twitter.com/oCIP0kL03r
— Press Trust of India (@PTI_News) March 15, 2025







