ಬಿಹಾರ: ಪತ್ರಕರ್ತನ ಹತ್ಯೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

ಪತ್ರಕರ್ತ ವಿಮಲ್ ಯಾದವ್ | Photo: PTI
ಪಾಟ್ನಾ: ಅರಾರಿಯಾ ಜಿಲ್ಲೆಯಲ್ಲಿ ಪತ್ರಕರ್ತ ವಿಮಲ್ ಯಾದವ್ ಅವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಬಂಧಿತ ನಾಲ್ವರು ಆರೋಪಿಗಳನ್ನು ವಿಪಿನ್ ಯಾದವ್, ಭವೇಶ್ ಯಾದವ್, ಆಶಿಶ್ ಯಾದವ್ ಹಾಗೂ ಉಮೇಶ್ ಯಾದವ್ ಎಂದು ಪೊಲೀಸರು ಗುರುತಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ರೂಪೇಶ್ ಯಾದವ್ ಹಾಗೂ ಕ್ರಾಂತಿ ಯಾದವ್ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
‘ದೈನಿಕ್ ಜಾಗರಣ್’ ದಿನ ಪತ್ರಿಕೆಯ ಉದ್ಯೋಗಿಯಾಗಿದ್ದ ವಿಮಲ್ ಯಾದವ್(35) ಅವರನ್ನು ಅವರ ನಿವಾಸದಲ್ಲಿ ಶುಕ್ರವಾರ ಬೆಳಗ್ಗೆ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Next Story





