ಹೈದರಾಬಾದ್ | ‘ಕರಾಚಿ’ ಹೆಸರು ವಿರೋಧಿಸಿ ಬಿಜೆಪಿ ಕಾರ್ಯಕರ್ತರಿಂದ ಬೇಕರಿ ಮೇಲೆ ದಾಳಿ: ಪ್ರಕರಣ ದಾಖಲು

Screengrab:X/@anusharavi10
ಹೈದರಾಬಾದ್: ಶಂಶಾಬಾದ್ನಲ್ಲಿರುವ ಕರಾಚಿ ಬೇಕರಿಯ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಕನಿಷ್ಠ 10 ಮಂದಿ ಬಿಜೆಪಿ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಾಗಿದೆ.
ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ಗಳಡಿ ಬಿಜೆಪಿ ಕಾರ್ಯಕರ್ತರ ವಿರುದ್ಧ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಯ ಇನ್ಸ್ಪೆಕ್ಟರ್ ಕೆ.ಬಾಲರಾಜು, ಬಿಜೆಪಿ ಪಟ್ಟಣ ಘಟಕದ ಅಧ್ಯಕ್ಷ ವಂಶಿ ಸೇರಿದಂತೆ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರತಿಭಟನಾಕಾರರು ಬೇಕರಿಯೊಳಗೆ ಪ್ರವೇಶಿಸದಿದ್ದರೂ, ಅದರ ನಾಮಫಲಕಕ್ಕೆ ಹಾನಿಯೆಸಗಿದ್ದಾರೆ. ಬೇಕರಿಯ ಕರಾಚಿ ಎಂಬ ಹೆಸರನ್ನು ಬಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ಹಾಗೂ ಬೇಕರಿ ಧ್ವಂಸದ ವಿಡಿಯೊಗಳು ರವಿವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ವಿಡಿಯೊದಲ್ಲಿ ಪ್ರತಿಭಟನಾಕಾರರು ಕೈಯಲ್ಲಿ ಭಾರತೀಯ ಧ್ವಜವನ್ನು ಹಿಡಿದುಕೊಂಡು, 'ಭಾರತ್ ಮಾತಾ ಕಿ ಜೈ', 'ಜೈ ಜವಾನ್' ಹಾಗೂ 'ಪಾಕಿಸ್ತಾನ ಮುರ್ದಾಬಾದ್' ಎಂಬ ಘೋಷಣೆಗಳನ್ನು ಕೂಗುತ್ತಿರುವುದು ಸೆರೆಯಾಗಿದೆ.
ಈ ಬೇಕರಿ ಶೇ. 100ರಷ್ಟು ಭಾರತೀಯ ಬ್ರ್ಯಾಂಡ್ ಆಗಿದ್ದು, ಇದನ್ನು ನನ್ನ ತಾತಾ 1953ರಲ್ಲಿ ಸ್ಥಾಪಿಸಿದ್ದರು ಎಂದು ಬೇಕರಿಯ ಮಾಲಕರು ಮಾಧ್ಯಮಗಳಿಗೆ ತಿಳಿಸಿದ ಕೆಲವೇ ದಿನಗಳ ಅಂತರದಲ್ಲಿ ಈ ದಾಳಿ ನಡೆದಿದೆ.
Men calling themselves nationalists vandalising an Indian owned Karachi bakery in Hyderabad.
— Anusha Ravi Sood (@anusharavi10) May 11, 2025
It's a 6-decade old Indian brand founded by founded by Khanchand Ramnani.
Poor Karachi bakery that has nothing to do with Pakistan becomes the victim of idiocy every single time. pic.twitter.com/XDkmtMnkgp







