ಕಾಲ್ತುಳಿತ ದುರಂತ ಸಂಭವಿಸಿದರೂ ಕರೂರು ಸಂಸದೆ ವಿದೇಶದಲ್ಲಿದ್ದಾರೆಂದು ಸುಳ್ಳು ಪೋಟೊ ಹಂಚಿಕೊಂಡ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!

Photo credit: X/@jothims
ಹೊಸದಿಲ್ಲಿ : ಕರೂರು ಕಾಲ್ತುಳಿತ ದುರಂತದಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವಾಗ ಕ್ಷೇತ್ರದ ಸಂಸದೆ ಜೋತಿಮಣಿ ಸೆನ್ನಿಮಲೈ ಅವರು ವಿದೇಶದಲ್ಲಿ( ಅರ್ಜೆಂಟೀನಾದಲ್ಲಿ) ಜಾರ್ಜ್ ಸೊರೊಸ್ ಪ್ರಾಯೋಜಿತ “ಪ್ರೋಗ್ರೆಸಿವ್ ಅಲೈಯನ್ಸ್ʼ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್ನಲ್ಲಿ ಪೋಟೊವೊಂದನ್ನು ಹಂಚಿಕೊಂಡಿದ್ದರು. ಆದರೆ ಇದು ಸುಳ್ಳಾಗಿದ್ದು, ನನ್ನ ಹಳೆಯ ಪೋಟೊ ಹಂಚಿಕೊಳ್ಳಲಾಗಿದೆ ಎಂದು ಸಂಸದೆ ಜೋತಿಮಣಿ ಸೆನ್ನಿಮಲೈ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಟೊವೊಂದನ್ನು ಹಂಚಿಕೊಂಡ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ಕರೂರು ಕಾಲ್ತುಳಿತ ದುರಂತದಲ್ಲಿ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿರುವ ಸಮಯದಲ್ಲಿ ತಮಿಳುನಾಡಿನ ಕಾಂಗ್ರೆಸ್ ಸಂಸದೆ ಜೋತಿಮಣಿ ಸೆನ್ನಿಮಲೈ ಅವರು ಜಾರ್ಜ್ ಸೊರೊಸ್ ಪ್ರಾಯೋಜಿತ “ಪ್ರೋಗ್ರೆಸಿವ್ ಅಲೈಯನ್ಸ್”( ಪ್ರಗತಿಶೀಲ ಒಕ್ಕೂಟ) ಸಭೆಯಲ್ಲಿ ಭಾಗವಹಿಸುತ್ತಿರುವುದು ಏಕೆ? ಅವರ ಮೊದಲ ಆದ್ಯತೆಯೇನು ಎಂದು ಪ್ರಶ್ನಿಸಿದ್ದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂಸದೆ ಜೋತಿಮಣಿ ಸೆನ್ನಿಮಲೈ, ಅಮಿತ್ ಮಾಳವೀಯ ಅವರೇ, ಮಣಿಪುರ ಹೊತ್ತಿ ಉರಿಯುತ್ತಿದ್ದಾಗ ನರೇಂದ್ರ ಮೋದಿ ಜಗತ್ತನ್ನೇ ಸುತ್ತಾಡುತ್ತಾರೆ. ನಾನು ಅವರಂತೆ ಅಲ್ಲ. ನನ್ನ ಜನರ ನೋವಿನ ಸಮಯದಲ್ಲಿ ನಾನು ಅವರೊಂದಿಗೆ ನಿಲ್ಲುತ್ತೇನೆ ಎಂದು ದುರಂತ ಸಂಭವಿಸಿದಾಗ ಸಂತ್ರಸ್ತರ ಜೊತೆಗಿದ್ದ ಪೋಟೊವನ್ನು ಹಂಚಿಕೊಂಡಿದ್ದಾರೆ.
ಮೃತದೇಹಗಳ ಮೇಲಿನ ರಾಜಕೀಯ ಬಿಜೆಪಿಯ ಡಿಎನ್ಎಯಲ್ಲಿ ಬೇರೂರಿದೆ. ಮುಂದಿನ ಬಾರಿ ಹಳೆಯ ಫೋಟೊಗಳನ್ನು ಪೋಸ್ಟ್ ಮಾಡಬೇಡಿ. ಈ ಚಿತ್ರವು ದುರಂತಕ್ಕೆ ಬಹಳ ಹಿಂದಿನದ್ದು ಅಂದರೆ ಸೆಪ್ಟೆಂಬರ್ 19 ರದ್ದಾಗಿದೆ. ನಾಚಿಕೆಯಿಲ್ಲದವರು ಎಂದು ಜೋತಿಮಣಿ ಸೆನ್ನಿಮಲೈ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
I am not @narendramodi to roam around the world while Manipur burns, @amitmalviya. I stand with my people in their time of pain. Politics over dead bodies is ingrained in the BJP’s DNA.
— Jothimani (@jothims) October 4, 2025
Next time don’t tweet dated pics. This picture is from 19 th Septemper much before the… https://t.co/nhWyWQnarY pic.twitter.com/u9ZNhfkEC6







